ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ಮತ್ತೆ ನಿನಾದ.. ಏಪ್ರಿಲ್ 12, 2011

Filed under: ಚಿಂತನೆ,ನಾದ ಗಾಂಭೀರ್ಯ — ಅನಿಶ್ ಪಿ ವಿ @ 4:59 ಅಪರಾಹ್ನ

ಹೊಸ ವರುಷ ಬಂದಿದೆ, ಉಗಾದಿಯ ಬೇವು ಬೆಲ್ಲ ಸವಿದಾಗಿದೆ. ಹೊಸ ವರುಷದ ನನ್ನ ಹೊಸ ಪ್ರತಿಜ್ನೆಯನ್ನೂ ಕೈಗೊಂಡದ್ದಾಗಿದೆ. ಅದನ್ನು ತಿಳಿಸಿ ನಿಮಗೆ ತಲೆನೋವು ತರಲೆಂದೆ ನಾನಿಲ್ಲಿ ಹಾಜರು. ಬಿಡುವಿಲ್ಲದ ಈ ಬಕಿನಲ್ಲಿ ನಾವಾಗಿಯೆ ಬಿಡುವು ಮಾಡಿಕೊಳ್ಳಬೇಕೆಂಬ ಹೊಸ ಪಾಠ ಕಲಿತಿರುವ ನಾನು ಇನ್ನು ಮುಂದೆ ೧೫ ದಿನಗಳಿಗೊಮ್ಮೆಯಾದರೂ ಒಂದು ಬರಹ ಬ್ಲಾಗಿಸಲೇ ಬೇಕೆಂದು ತೀರ್ಮಾನಿಸಿದ್ದೇನೆ. ಓದುವ ತಲೆನೋವು ನಿಮಗೆ. ಮೊದಲಿನಂತೆ ನಿಮ್ಮ ಪ್ರೋತ್ಸಾಹ, ಆಶೀರ್ವಾದಗಳು ಸದಾ ಇರಲಿ. ನೀವು ಪ್ರತೀ ಬರಹಗಳನ್ನು ಓದುವಿರೆಂಬ ನಂಬಿಕೆಯೊಂದಿಗೆ
– ಅನಿನಾದ (ಅನೀಶ್ ಪಿ ವಿ)

 

ನವೆಂಬರ್ ಕನ್ನಡಿಗರಿಗೊಂದು ಪತ್ರ… ನವೆಂಬರ್ 17, 2010

ಓದುಗರೇ,
ನೀವು ನನ್ನ ಮೇಲೆ ಕೋಪಗೊಂಡಿರಬಹುದು ಖಂಡಿತ. ಅನುಮಾನವೇ ಇಲ್ಲ. ಕಾರಣಗಳು ಹಲವು, ಅದರಲ್ಲಿ ಕೆಲವು… ಸಮಯದ ನಂತರ ಲೇಖನಿ ಹಿಡಿದಿದ್ದೇನೆ. ಹಬ್ಬ ಹರಿದಿನಗಳು ಸರಿದು ಹೋದ ಮೇಲೆ ಇವನೇನಪ್ಪಾ ಕೊರೀತಾನೆ ಅಂದುಕೋಬೇಡಿ… ಇವಾಗ ನಾನು ಹೇಳ ಬಯಸಿರೋದು ಹಬ್ಬಗಳ ಬಗ್ಗೇನೆ. ಏನ್ ಕತೆ, ಯಾರ ಕತೆ, ಯಾವ ಹಬ್ಬ ಅಂತೆಲ್ಲ ತಿಳೀಬೇಕಾದ್ರೆ ಮುಂದೆ ಓದಿ. ನವಂಬರ್ ತಿಂಗಳು ಬಂದು ಇವತ್ತಿಗೆ ಸರೀ ೧೭ ದಿವಸ ಆಯ್ತು. ಯಾಕಪ್ಪಾ ಈ ವಿಷ್ಯ ಅಂತಂದ್ರೆ… ದಸರ ಕಳೆದು ನೋಡ್ ನೋಡ್ತಿದ್ದ ಹಾಗೇನೇ ಬಂತು ಕನ್ನಡ ರಾಜ್ಯೋತ್ಸವ. ನವೆಂಬರ್ ೧, ಕಾಗೆಗಳ ತರ ಎಲ್ರೂನೂ ಕ.. ಕ.. ಕ.. ಅಂತ ಕನ್ನಡದ ಜಪ ಮಾಡಿದ್ರು. ಹಾನ್ ನಾನೂ ಕನ್ನಡಾಭಿಮಾನಿ, ಅಚ್ಚ ಕನ್ನಡಿಗ. ಅವ್ರು ಮಾಡಿದ್ದು ತಪ್ಪು ಅಂತ ಹೇಳ್ತಿಲ್ಲ. ಇಷ್ಟೆಲ್ಲ ಮಾಡಿದ್ರಲ್ಲ ಅದಾಗಿ ಮೂರೇ ದಿವಸಕ್ಕೆ ಬಂತು ದೀಪಾವಳಿ. ಅದರ ಸಡಗರ, ಸಂಭ್ರಮದಲ್ಲಿ ಎಲ್ಲರೂ ಕನ್ನಡ ತಾಯೀನ ಮರೆತೇ ಬಿಟ್ರು. ಅದ್ರಲ್ಲೇನ್ ವಿಷೇಶ ಪ್ರತೀ ಸಲಾನೂ ಹಾಗೆ ಅಂತಿರಾ.. ಹ ಹೌದು.. ಅದೇ ನನಗೆ ಸ್ವಲ್ಪ ಬೇಸರ ತರಿಸಿರೋದು.

ಬೇಸರ ಏನಪ್ಪಾಂತಂದ್ರೆ ಈ ನವೆಂಬರ್ ೧ ರಂದು ಮಾತ್ರ ಕನ್ನಡ ರಾಜ್ಯೊತ್ಸವ ಯಾಕೆ ಆಚರಿಸಬೇಕು ಅಂತ, ನವೆಂಬರ್ ಕನ್ನಡಿಗರಾಗಿ!. ಈಗ ನೀವು “ಕನ್ನಡ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.” ಹೀಗೊಂದು ವ್ಯಾಖ್ಯಾನ ಕೊಟ್ಟರೆ ಅಚ್ಚರಿಯೇನಿಲ್ಲ. ಆದರೆ ಇದರಿಂದ ಕನ್ನಡದ ಉಳಿವಿಗೆ ಎಲ್ಲಿ ಪ್ರೋತ್ಸಾಹ ದೊರಕಿತು ಒಮ್ಮೆ ಯೋಚಿಸಿ. ಕನ್ನಡ ನಾಡಿನ ಹೆಮ್ಮೆಯ ಕನ್ನಡಿಗರಾದ ನಾವೇ ಹೀಗಾದಲ್ಲಿ ಪರದೇಶೀಯ, ಪರ ರಾಜ್ಯದ ಕನ್ನಡಿಗರ ಗತಿಯೇನೆಂದು ಯೋಚಿಸಿದ್ದೀರಾ?

ಕನ್ನಡ ನುಡಿಯನ್ನು ಆಡುಮಾತಾಗಿ ೨೫೦೦ ವರ್ಷಗಳಿಂದ ಬಳಸಲಾಗುತ್ತಿದೆ. ಕನ್ನಡ ಲಿಪಿ ಮತ್ತು ಬರೆಯುವ ಪದ್ಧತಿ ಸುಮಾರು ೧೯೦೦ ವರ್ಷಗಳ ಹಿಂದೆಯೇ ಇದ್ದಿತು. ಕನ್ನಡ ಭಾಷೆಯ ಮೊದಲ ಬೆಳವಣಿಗೆಯು ಇತರ ದ್ರಾವಿಡ ನುಡಿಗಳನ್ನು ಹೋಲುತ್ತದೆ. ನಂತರದ ಶತಮಾನಗಳಲ್ಲಿ ಕನ್ನಡ ನುಡಿಯಲ್ಲಿ, ಸಂಸ್ಕೃತ/ಸಕ್ಕದ, ಪ್ರಾಕೃತ, ಮರಾಠಿ ಮತ್ತು ಪಾರಸೀ ಮುಂತಾದ ಹೊರಭಾಷೆಗಳ ಪ್ರಭಾವದಿಂದ ಕನ್ನಡದಲ್ಲಿ ಹೆಚ್ಚು ಹೆಚ್ಚು ಆ ನುಡಿಗಳ ಪದಗಳು ಬೆರೆತು ಹೋಗಲು ಶುರುವಾಯಿತು. ಕನ್ನಡವು ದಕ್ಷಿಣ ಭಾರತದ ಮೊಲಭಾಷೆ ದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ.

ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲಾಗುತ್ತದೆ, ಮತ್ತು ಸ್ವಲ್ಪ ಮಟ್ಟಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ (ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಇಲ್ಲಿ ಸಹ ಉಪಯೋಗಿಸಲಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಸಹ ಸಾಕಷ್ಟು ಕನ್ನಡಿಗರ ಜನಸಂಖ್ಯೆ ಇದೆ. ಇವರು ಈಚೆಗೆ ಕೆಲಸ ಹುಡುಕಿಕೊಂಡು ವಲಸೆ ಹೋದವರು. ಇ೦ದು ಕನ್ನಡವು ಮಲ್ಲಿಗೆಯ೦ತೆ ಅರಳಿ ತನ್ನ ಕ೦ಪನ್ನು ಎಲ್ಲೆಡೆಯು ವ್ಯಾಪಿಸಿದೆ. ಕನ್ನಡ ಭಾಷೆ ಭಾರತ ದೇಶದ ೨೨ ಅಧಿಕೃತ ರಾಷ್ಟ್ರ ಭಾಷೆಗಳಲ್ಲಿ ಒಂದು. ಕರ್ನಾಟಕ ರಾಜ್ಯದ ಏಕೈಕ ಅಧಿಕೃತ ಭಾಷೆ ಕನ್ನಡ. ಕರ್ನಾಟಕದಲ್ಲಿ ಕನ್ನಡಿಗರೇ ಆದ್ಯತೆ. ಅಕ್ಟೋಬರ್ ೩೧, ೨೦೦೮ ರನ್ದು ಭಾರತ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನ ನೀಡಿದೆ. ಶಾಸ್ತ್ರೀಯ ಭಾಷೆಗೆ ಕನ್ನಡದಲ್ಲಿ “ಚೆನ್ನುಡಿ” ಎಂದೂ ಕರೆಯಬಹುದು.ಇಷ್ಟೆಲ್ಲಾ ಇತಿಹಾಸ ಇರೋ ಒಂದು ಭಾಷೆನ ಹೀಗೆ ಒಂದು ದಿನದ ಆಚರಣೆ ಮುಗಿಸಿ ಕೊಲ್ಲೋದು ಎಷ್ಟು ಸರಿ?

ಹಾನ್ ನನಗಿಲ್ಲಿ ಒಬ್ಬ ಶ್ರೇಷ್ಠ ಕನ್ನಡಾಭಿಮಾನಿ, ಖ್ಯಾತ ಬರಹಗಾರರೊಬ್ಬರನ್ನ ನೆನೆಸಿಕೊಳ್ಳಲೇ ಬೇಕು, ಅವರೇ ನಮ್ಮ ವಿಜಯ ಕರ್ನಾಟಕದ  ಖ್ಯಾತ ಅಂಕಣಕಾರರಲ್ಲೊಬ್ಬರು. ಪ್ರತೀ ರವಿವಾರ “ಪರಾಗ ಸ್ಪರ್ಶ”ದ ಸವಿ ಉಣಿಸಿಕೊಂಡು ಬರುತ್ತಿರುವ ನಮ್ಮ ಶ್ರೀವತ್ಸ ಜೋಷಿ ಅವರು. ಅವರು ಅಮೇರಿಕದಿಂದ ಕನ್ನಡಿಗರಿಗೆ, ಕನ್ನಡ ಪತ್ರಿಕೆಗೆ ಬರೆಯುತ್ತಿದಾರೆ ಎಂದರೆ ಎಷ್ಟಿರಬಹುದು ಅವರ ಕನ್ನಡ ಪ್ರೇಮ ಅಂತ ಊಹಿಸಿ. ಅವರು ಅವರ ಬಳಗದ ಕನ್ನಡಿಗರೆಲ್ಲಾ ಸೇರಿ ಅಮೆರಿಕೆಯಲ್ಲಿ ಕನ್ನಡ ಬಳಗ ಸ್ತಾಪಿಸಿದ್ದಾರೆ. ಆಗಾಗ ಕನ್ನಡ ಪರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಾರೆ. ನಿಜಕ್ಕೂ ಅವರಿಗೊಂದು ಧನ್ಯವಾದ ಹೇಳಲೇ ಬೇಕು… ಧನ್ಯವಾದಗಳು ಸರ್.

ಯಾವುದೇ ಭಾಷೆಯ ಸಾಹಿತ್ಯದ ಜನಪ್ರಿಯತೆ ಸುಶಿಕ್ಷಿತ ಮತ್ತು ಆಸಕ್ತ ಜನರಿಂದೆ ಪಡೆದ ಮನ್ನಣೆಯನ್ನು ಅವಲಂಬಿಸುತ್ತದೆ. ಆದರೆ ಕಾವ್ಯದ ನಿಜವಾದ ಜನಪ್ರಿಯತೆ ತಿಳಿದುಬರುವುದು ಅದು ಸಾಮಾನ್ಯ ಜನರ ಬಾಯಲ್ಲಿ ನಲಿದಾಗ. ಯಾವುದೇ ಸಾಹಿತ್ಯ ಪ್ರಕಾರಕ್ಕೂ ಸರ್ವಜನಮಾನ್ಯತೆ ಪಡೆಯುವುದು ಕಷ್ಟ. ಕನ್ನಡ ಸಾಹಿತ್ಯದ ಕೆಲವು ಪ್ರಕಾರಗಳು ಇಂತಹ ಮಾನ್ಯತೆಯನ್ನು ಪಡೆದಿವೆ. ಕುಮಾರವ್ಯಾಸನ ಭಾರತ ಇಂದಿಗೂ ಜನಪ್ರಿಯವಾಗಿ ಉಳಿದಿದೆ. ಭಾವಗೀತೆಗಳು ಅನೇಕ ಕನ್ನಡ ಹಾಡುಗಳನ್ನು ಜನಪ್ರಿಯಗೊಳಿಸಿ ಜನರ ಬಾಯಲ್ಲಿ ಓಡಾಡುತ್ತಿವೆ. ಅಂತೆಯೇ ಎಲ್ಲಾ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವ ನಾವು ಕನ್ನಡ ಹಬ್ಬವನ್ನೂ ವಿಜ್ರಂಭಣೆಯಿಂದ ಆಚರಿಸುತ್ತೇವೆ. ಆದರೆ ಅದು ನವೆಂಬರ್ ತಿಂಗಳ ಹಬ್ಬವಾಗದೆ ವರುಷವಿಡೀ ಹರುಷ ತರುವ ಹಬ್ಬವಾಗಲಿ. ನಮ್ಮ ಕೈಲಾದಷ್ಟು ಕನ್ನಡ ಮಾತನಾಡೋಣ, ಕನ್ನಡ ಉಳಿಸಿ ಬೆಳೆಸೋಣ.

 

ನಗೆ ಹೊಗೆ-೨ ಅಕ್ಟೋಬರ್ 22, 2010

Filed under: ಚಟ್ ಪಟ್ ಚಟಾಕಿ,ನಗೆ ಹೊಗೆ (ನಗೆಹನಿಗಳ ಸಂಗ್ರಹ) — ಅನಿಶ್ ಪಿ ವಿ @ 8:20 ಅಪರಾಹ್ನ
Tags:

ಜವಾನ:”ಏನಾಗಬೇಕಿತ್ತು ಸ್ವಾಮಿ…?”
ಆಗಂತುಕ:”ನಿಮ್ಮ ಮಾಲಿಕರನ್ನ ಭೇಟಿಯಾಗಬೇಕಿತ್ತು”
ಜವಾನ:”ಅವರನ್ನು ಏಕೆ ಭೇಟಿಯಾಗಬೇಕಿತ್ತು?”
ಆಗಂತುಕ:”ಅವರದೊಂದು ಬಿಲ್ಲು…”
ಜವಾನ:”ಹೌದಾ…! ಅವರು ನಿನ್ನೇನೆ ಊರಿಗೆ ಹೋಗಿದ್ದಾರೆ”
ಆಗಂತುಕ:”…ಪೇಮೆಂಟ್ ಮಾಡಬೇಕಿತ್ತು.”
ಜವಾನ:”ಹೌದಾ ಸಾರ್..! ಅವ್ರು ಇವತ್ತು ಬೆಳಿಗ್ಗೆನೇ ವಾಪಾಸು ಬಂದಿದ್ದಾರೆ !”

 

ನೆನಪಿನಂಗಳದಲ್ಲಿ… ಅಕ್ಟೋಬರ್ 7, 2010

ಅರಳುವ ಹೂವುಗಳ ಜೊತೆಯಲ್ಲಿ
ಅರಳುತಿರುವ ನನ್ನ ಸುಂದರ ಮನಸು
ಅಂತರಾಳದಲಿ ಹುದುಗಿರುವ
ನೆನಪುಗಳನು ಕೆದಕಿದೆ.

ಅದೆಂದೋ ಆದ ಘಟನೆ
ಕಣ್ಣಂಚಿನಲಿ ನರ್ತಿಸುತ್ತಿದೆ
ಮೂರಗಲ ಮನಸಿನಲಿ
ಊರಗಲ ಕನಸುಗಳ ಹಾಸಿ.

ಅಭಯ ನೀಡಿದವರ ನೆನಪು
ಧೈರ್ಯ ತುಂಬಿದವರ ನೆನಪು
ಸುಮಧುರ ಬಾಂಧವ್ಯ ಬೆಸೆದ
ಸಹೋದರಿಯ ನೆನಪು…
ನಿಟ್ಟುಸಿರಿನಲಿ ಪಟಬಿಚ್ಚಿ ತೇಲುತ್ತಿದೆ.

ಶಾಲೆ, ಕಾಲೇಜಿನಲಿ ಕಳೆದ ಕ್ಷಣಗಳ
ಸವಿನೆನಪು, ಬಾನಂಗಳದಲಿ
ಚಿತ್ತಾರ ಮೂಡಿದಂತೆ ಚಿಗುರೊಡೆದಿದೆ
ಅಕ್ಕರೆಯ ಅಪ್ಪುಗೆಯನು ನೀಡಿ.

ಶಾಂತವಾಗುತ್ತಿದೆ ಮನಸು..ನೆನಪೆಂಬ
ಸಂಕೋಲೆಗಳ ಕೊಂಡಿಗಳನು ಕಳಚುತ್ತಾ,
ಸುಮ್ಮನೆ ಕುಳಿತಿದ್ದೇನೆ ನಾನು
ಏನೂ ಮಾಡಲಾಗದಂತೆ…
ಹಳೆಯ ನೆನಪುಗಳ ಜೊತೆ ಹರಟುತ್ತಾ.

 

 

ನಗೆ ಹೊಗೆ-೧ ಸೆಪ್ಟೆಂಬರ್ 21, 2010

ನಮ್ಮ ಮಂದಣ್ಣ ಎಸ್ ಎಲ್ ಸಿ ಪರೀಕ್ಷೆನಲ್ಲಿ ಡುಮುಕಿ ಹೊಡೆದ.

ತಂದೆ: ಲೋ ಮಗನೇ ನೀ ಏನ ಮಾಡಾಕ್ ಹತ್ತಿ, ಪಕ್ಕದ್ಮ್ನೆ ಜಲಜ ಪಸ್ಟ್ ಬಂದಾಳಂತಲ್ಲೋ…
ನೀನೋ ಫೇಲಾಗಿದೀಯ, ಇನ್ನಾರ ಅವಳ್ನ ನೋಡಿ ಕಲಿತ್ಕೋ.

ಮಂದಣ್ಣ ಎರಡನೇ ಬಾರೀನೂ ಪರೀಕ್ಷೆನಲ್ಲಿ ಡುಮುಕಿ ಹೊಡೆದ.

ತಂದೆ: ಲೋ ಮಗನಾ, ಈಸಲ ಏನಾತೋ?

ಮಗ: ನೀ ಹೇಳ್ದಂಗ ಮಾಡ್ದೆ ಅಪ್ಪ, ಅವಳ್ನ ನೊಡೀ, ನೋಡಿ.. ನಾ….

ತಂದೆ ನಿನ್ನ ವಯಸ್ಸಿನ ಹುಡುಗ್ರು ಓದು, ಬರಹದಲ್ಲಿ ಎಷ್ಟು ಶ್ರದ್ದೆ ವಹಿಸ್ತಾರಂತ ನಿನಗ ಗೊತ್ತದೇನ್?

“ಲಾಲ್ಬಹದ್ದೂರ್ ಶಾಸ್ತ್ರಿಯವರು ನಿನ್ ವಯಸಿನಾಗ ಆ ದಡದಿಂದ ಈ ದಡಕ್ಕ ಈಜಿ, ನದಿ ದಾಟಿಕೊಂಡು ಸಾಲೀಗೆ ಹೋಗಿ ಬರ್ತಿದ್ರು. ರಾತ್ರಿ ಸೀಮೆ ಎಣ್ಣೆ ಬೆಳಕಿನಲ್ಲಿ ಪಾಠ ಓದ್ತಿದ್ರು.” ಗೊತ್ತದೇನ ನಿನಗ? ಅಂತ ಮೂದಲಿಸಿದ್ರು.”

ಮಂದಣ್ಣ ಮುಖ ಗಂಟು ಹಾಕಿಕೊಂಡು “ಇರಬಹುದು, ನಿನ್ನ ವಯಸ್ಸಿನಾಗ ರಾಧಾಕ್ರಿಷ್ಣನ್ ರಾಷ್ಟಪತಿ ಆಗಿದ್ರು” ಅಂದ.

-ಸಂಗ್ರಹ