ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ಹಾಕಿಗೆ ಬೆನ್ನು ಹಾಕಿ…ಕ್ರಿಕೆಟ್ ಶೋಕಿ… ಫೆಬ್ರವರಿ 21, 2010

Filed under: ಚಿಂತನೆ,ನಾದ ಗಾಂಭೀರ್ಯ,ವಿಮರ್ಶೆ — ಅನಿಶ್ ಪಿ ವಿ @ 5:18 ಅಪರಾಹ್ನ
Tags: , , , , ,

೨ರ ಹಸುಗೂಸಿನಿಂದ ಹಿಡಿದು ೯೨ರ ಅಜ್ಜಯ್ಯನ ವರೆಗೂ ಕಣ್ಣು ಬಾಯಿ ಬಿಟ್ಟು ನೋಡುವ ಪ್ರಸಿದ್ದ ಆಟ ಕ್ರಿಕೆಟ್ಟು. ಆಟ ಯಾವುದೇ ಇರಲಿ ಅದರ ಧ್ಯೇಯೋಧೇಶಗಳು ಒಂದೇ ಎಂಬುದು ನನ್ನ ಅಭಿಪ್ರಾಯ(ದೇಶಾದಿಗಳ ನಡುವೆ ಸಹೋದರ ಭಾವ ಬೆಳೆಸುವುದು). ಆದರೆ ಇಂದು ಕಾಲ ಬದಲಾಗಿದೆ ಆಟ ಆಟವಾಗುವ ಬದಲು ಸೇಡು, ದುರಾಸೆ, ತನ್ನತನ, ಅತಿಯಾದ ಆಸೆಗಳನ್ನು ತುಂಬಿ ಎರಡು ಮನಸುಗಳ ನಡುವಿನ ಬಾಂಧವ್ಯವನ್ನು ಕಿತ್ತೆಸೆವ ಬಾಣವಾಗಿದೆ. ಆಟಗಳ ಹಿರಿಯಣ್ಣಾ(ಭಾರತದಲ್ಲಿ) ಎಂದೆನಿಸಿರುವ ಕ್ರಿಕೆಟ್ ಬಿಟ್ಟರೆ ನಮ್ಮ ಜನಕ್ಕೆ ಬೆರಾವ ಆಟವೂ ಬೇಡ ಎಂಬುದು ಖೇದಕರ.

ಇತ್ತೀಚೆಗಂತೂ ಪರಿಸ್ತಿತಿಯ ವೈಪರಿತ್ಯತೆ ಕೈತಪ್ಪಿದೆ…ಎಂದರೆ ತಪ್ಪಿದೆ ಎನಿಸದು! ರಾಜಕಾರಣಿಗಳು, ಮಾಧ್ಯಮವೃಂದ, ವಿವೇಚನೆಯಿಲ್ಲದ ಜನ ಎಲ್ಲರೂ ಕ್ರಿಕೆಟ್ಟಿನತ್ತ ಮುಖಮಾಡಿದ್ದಾರೆ. ಅದು ತಪ್ಪಲ್ಲ. ಮೂಲತಹ ನಾನೂ ಕ್ರಿಕೆಟ್ ಅಭಿಮಾನಿ. ಆದರೆ ಬೇರೆಲ್ಲಾ ಆಟಗಳನ್ನು ಕಡೆಗಣಿಸುವುದು ಎಷ್ಟು ಸರಿ ಎಂಬುದು ನನ್ನ ವಾದ. ಟೆನ್ನಿಸ್, ಹಾಕಿ, ಕಾಲ್ಚೆಂಡು, ಕಬಡ್ಡಿ, ಬೇಸ್ ಬಾಲ್ ಮುಂತಾದವು ಆಟಗಳೇ ಅಲ್ಲವೆ? ಅಲ್ಲಿನ ಕ್ರೀಡಾಳುಗಳನ್ನು ಕಡೆಗಣಿಸಿರುವುದು ಸರಿಯೆ?

ಸಂತೋಷಕರ ಸಂಗತಿ ಎಂದರೆ ನಮ್ಮ ರಾಷ್ಟ್ರೀಯ ಆಟವಾದ ಹಾಕಿಯ ವಿಶ್ವಕಪ್ ಈ ಬಾರಿ ೨೮-ಫೆಬ್ರುವರಿಯಿಂದ ಭಾರತದಲ್ಲಿ ನಡೆಯಲಿದೆ. ಆದರೆ ಇದಕ್ಕೆ ಮಾಧ್ಯಮದವರ ಪ್ರಚಾರ, ರಾಜಕಾರಣಿಗಳ ಸಹಕಾರ ದೊರಕುತ್ತಿಲ್ಲ. ಕ್ರಿಕೆಟ್ಟಿನ ಕೇವಲ ಒಂದು ಟ್-೨೦ ಮ್ಯಾಚಿಗೆ ಕೋಟಿಗಟ್ಟಲೆ ಸುರಿಯುವ, ಒಬ್ಬ ಕ್ರಿಕೆಟಿಗನ ಬೊಕ್ಕಸಕ್ಕೆ ಲಕ್ಷಗಟ್ಟಲೆ ಸುರಿವ ಸುಸಂದರ್ಭದಲ್ಲಿ ಏನೂ ಮಾತನಾಡದ ಸರ್ಕಾರ, ವಿಶ್ವಕಪ್ ಹಾಕಿ-೨೦೧೦ ರ ಬಗೆಗೆ ಏನನ್ನೂ ಮಾಡಿಲ್ಲ… ಎನ್ನಲು ಬಹಳ ನಾಚಿಕೆಯೆನಿಸುತ್ತಿದೆ.

ಸರ್ಕಾರ ಮೂಕವೇ, ಜನಸಮೂಹ ಕುರುಡೇ, ಮಾಧ್ಯಮ ಸ್ನೇಹಿತರು ಕಿವುಡರೇ…?!!!! ಅದೇನೇ ಇರಲಿ…ನಾವಾದರೂ  ನಮ್ಮ ರಾಷ್ಟ್ರೀಯ ಆಟವನ್ನು ಬೆಳೆಸಿ ಉಳಿಸೋಣ.

Advertisements