ನನ್ನ ಮನಸಿನ ತುಂಬಾ ನೀನೆ ತುಂಬಿಹೆಯಲ್ಲ
ನೀನಾರ ಜೀವನದ ಭಾವಗೀತೆ|
ನನ್ನ ಮನದೊಳಗೆಲ್ಲಾ ಸುತ್ತಾಡುತಿಹೆಯಲ್ಲ
ನೀನಾವ ಹೂವಿನ ಸುಘಂದ ಮಾತೆ|
ನೀನಾರು ನನ್ನ ಮನದಾಳದಲಿ ಕುಳಿತಿರುವೆ
ನನ್ನ ಮನಸಿನ ತುಂಬಾ ನವ್ಯ ಗೀತೆ|
ಗೀತೆಯೇನದು ನನ್ನ ತಿಳಿ ಮನಸಿನಲಿ
ನವ ಭಾರತವನ್ನು ಕಟ್ಟುವಾಸೆ|
ಏನೆಂದು ಅರಿಯದೆಯೆ ಇನ್ನಷ್ಟು ಮತ್ತಷ್ಟು
ನನ್ನ ಮನ ಹುಡುಕಿಹುದು ನಿನ್ನ ಕುರುಹು|
ಇನ್ನೂ ಹುಡುಕುತಿಹೆ ನಾನಿನ್ನ ಯಾರೆಂದು
ನನ್ನ ಮನ ನೋಯಿಸುವ ಆಟ ಬೇಡ|
ಹೂಬನವು ಹಸಿರಾಗಿ ಕಾಯೆಲ್ಲ ಹಣ್ಣಾಗಿ
ಮಾಗಿರುವ ಕನಸೆಲ್ಲ ಮತ್ತೆ ಅರಳಿ|
ನನ್ನ ಮನಸಿನ ತುಂಬಾ ನಿನ್ನ ಕುರುಹಿದೆಯಲ್ಲ
ನೀನಾರ ಜೀವನದ ಭಾವಗೀತೆ?….||
ಕರೆ ಫೆಬ್ರವರಿ 26, 2010
ಅವಳು – ಸಹೋದರಿ! ಫೆಬ್ರವರಿ 14, 2010
ಅವಳ ಅಂದವ ನೋಡಿ ಮಂಕಾದೆ
ಕಾಲೇಜಿನಲ್ಲವಳ ಗೆಳೆಯನಾದೆ
ಒಂದು ದಿನ ಅವಳಿಲ್ಲವಾದರೆ…
ಕಾಲೇಜು ಬರಿದೆನಿಸುತ್ತಿತ್ತು…
ಆಕೆ ನನ್ನನ್ನು ಸಹೋದರ ಎಂದು
ತಿಳಿದುದ.. ನಾ ತಿಳಿಯದೇ ಹೋದೆ…
ಮನದಲ್ಲೆ ನಾನಾಕೆಯ ಪ್ರೀತಿಸಿದೆ…
ಅವಳ ಸೌಂದರ್ಯವನಲ್ಲ… ಭಾವನೆಗಳನ್ನು…
ಆಕೆ ನನ್ನ ಜೊತೆ ಹರಟುತ್ತಿದ್ದಳು
ಹಲವು ವಿಚಾರಗಳ ಬಗೆಗೆ ಚರ್ಚಿಸಿ
ಪ್ರತೀ ಬಾರಿ ನಾ ಸೋತು ಗೆಲ್ಲುತ್ತಿದ್ದೆ…
ಗೆಲ್ಲುತ್ತಿದ್ದೆ ಅವಳ ಮನವನ್ನು (ನನ್ನದೇ ಕಲ್ಪನೆ)…
ಎಂದೆಂದೂ ಅವಳದೇ ಸ್ನೇಹವನ್ನು
ಉಳಿಸಿಕೊಂಡಿದ್ದಳು – ಹೇಳಿದ್ದಳು ಒಮ್ಮೆ
ಹುಡುಗಾಟವಾಡಬೇಡ ಎಳೆ ಮಗುವಿನಂತೆ…
-ಸಭ್ಯನಾಗಿರು ಅಣ್ಣಾ ಎಂದು…
ಕೊನೆಗೆ ಆಟೊಗ್ರಾಫ್ ಪುಸ್ತಕದಲ್ಲಿಯೂ
ಸಹೋದರಿ ಶುಭ ಹಾರೈಸಿದಳು ಹೃದಯತುಂಬಿ
ನಾನಾಗ ತುಂಬಾ ಸಣ್ಣವನಾಗಿದ್ದೆ… ಏನೇನೋ-
ಕಲ್ಪಿಸಿಕೊಂಡದಕ್ಕೆ ಅವಳ ಬಗೆಗೆ.
ಪ್ರೀತಿಸಿ ಆದರೆ ನೇವು ಪ್ರೀತಿಸುವವರು ನಿಮ್ಮನ್ನು ಪ್ರೀತಿಸುತ್ತಾರೆಯೇ ಎಂಬುದು ತಿಳಿದಿರಲಿ.. ಅದೇನೇ ಇರಲಿ.. ಪ್ರೇಮಿಗಳ ದಿನದ ಶುಭಾಷಯಗಳು .
ನಿಮ್ಮ ಅಭಿಪ್ರಾಯ