ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ಕರೆ ಫೆಬ್ರವರಿ 26, 2010

ಕರೆಗೆ ಓಗೊಡುವ ನಿರೀಕ್ಷೆಯಲಿ...

ಕರೆಗೆ ಓಗೊಡುವ ನಿರೀಕ್ಷೆಯಲಿ...

ನನ್ನ ಮನಸಿನ ತುಂಬಾ ನೀನೆ ತುಂಬಿಹೆಯಲ್ಲ
ನೀನಾರ ಜೀವನದ ಭಾವಗೀತೆ|
ನನ್ನ ಮನದೊಳಗೆಲ್ಲಾ ಸುತ್ತಾಡುತಿಹೆಯಲ್ಲ
ನೀನಾವ ಹೂವಿನ ಸುಘಂದ ಮಾತೆ|
ನೀನಾರು ನನ್ನ ಮನದಾಳದಲಿ ಕುಳಿತಿರುವೆ
ನನ್ನ ಮನಸಿನ ತುಂಬಾ ನವ್ಯ ಗೀತೆ|
ಗೀತೆಯೇನದು ನನ್ನ ತಿಳಿ ಮನಸಿನಲಿ
ನವ ಭಾರತವನ್ನು ಕಟ್ಟುವಾಸೆ|
ಏನೆಂದು ಅರಿಯದೆಯೆ ಇನ್ನಷ್ಟು ಮತ್ತಷ್ಟು
ನನ್ನ ಮನ ಹುಡುಕಿಹುದು ನಿನ್ನ ಕುರುಹು|
ಇನ್ನೂ ಹುಡುಕುತಿಹೆ ನಾನಿನ್ನ ಯಾರೆಂದು
ನನ್ನ ಮನ ನೋಯಿಸುವ ಆಟ ಬೇಡ|
ಹೂಬನವು ಹಸಿರಾಗಿ ಕಾಯೆಲ್ಲ ಹಣ್ಣಾಗಿ
ಮಾಗಿರುವ ಕನಸೆಲ್ಲ ಮತ್ತೆ ಅರಳಿ|
ನನ್ನ ಮನಸಿನ ತುಂಬಾ ನಿನ್ನ ಕುರುಹಿದೆಯಲ್ಲ
ನೀನಾರ ಜೀವನದ ಭಾವಗೀತೆ?….||

Advertisements
 

ಓಶೋ…ಯಾರಿವರು??? ಜನವರಿ 8, 2010

Filed under: ಓಶೋ - ನಾದಾಮೃತ — Keshava Prasad M @ 4:44 ಅಪರಾಹ್ನ
Tags: , , ,

ಓಶೋ ರಜನೀಶರು...

ಓಶೋ ರಜನೀಶ್…. ಈಗ ಜಗತ್ತಿನಲ್ಲಿ ಈ ಹೆಸರನ್ನು ಕೇಳದವರು ಇಲ್ಲವೇ ಇಲ್ಲ  ಎನ್ನ ಬಹುದೇನೋ. ಆದರೆ ಇಲ್ಲಿ ನಾನು ಅವರ ಬಗ್ಗೆ ಜಾಸ್ತಿ ವಿವರಗಳನ್ನ ಕೊಡಲು ಬಯಸಲ್ಲ… ಆದರೆ ಮುಂದಿನ ದಿನಗಳಲ್ಲಿ ಇಲ್ಲಿ ನೀವು ಓಶೋ ಅವರ ಜೀವನ ಪ್ರೀತಿ,ಅವರ ವಿಚಾರಧಾರೆ,… ಇತ್ಯಾದಿ ಇತ್ಯಾದಿ ನನಗೆ ಇಷ್ಟವಾದ ಅವರ ವಿಚಾರಗಳ ಬಗ್ಗೆ ಬರೆಯಲಿದ್ದೇನೆ. ಇಲ್ಲಿ ಅವರ ಬಗ್ಗೆ ಒಂದು ಚಿಕ್ಕ ಪರಿಚಯ.. ಅವರ ಬಗ್ಗೆ ತಿಳಿದಿಲ್ಲದವರಿಗಾಗಿ…

ರಜನೀಶ್ ಚಂದ್ರ ಮೋಹನ್ ಎಂಬ ವ್ಯಕ್ತಿಯನ್ನು ಜಗತ್ತು ನೂರಾರು ಹೆಸರುಗಳಿಂದ ಕರೆದಿದೆ.ತಮಗೆ ಕಂಡ ಆತನ ಮುಖಕ್ಕೆ ತಮಗೆ ತೋಚಿದ ಹೆಸರನ್ನು ಜನರು ಕೊಡುತ್ತಾ

ಬಂದಿದ್ದಾರೆ.ಆದರೆ ಕ್ಷಣ ಕ್ಷಣಕ್ಕೂ ಹೊಸ ಮುಖಗಳನ್ನು ಅನಾವರಣಗೊಳಿಸುತ್ತಾ ಹೋಗುವ, ಹೆಚ್ಚು ಹೆಚ್ಚುಆಳಕ್ಕಿಳಿದಷ್ಟು ಹೊಸ ಆಯಾಮಗಳಲ್ಲಿ ತೆರೆದುಕೊಳ್ಳುತ್ತಾ ಹೋಗು

ಆ ವ್ಯಕ್ತಿಯ ಎದುರುಜಗತ್ತಿನ ಹೆಸರುಗಳೆಲ್ಲಾ ಕಳಾಹೀನವಾಗಿವೆ. ಆತನನ್ನು ಹಿಡಿದಿಡುವಲ್ಲಿ ಅಕ್ಷರಗಳ ಪುಂಜಗಳುಸೋತಿವೆ. ಆತನನ್ನು ಆಚಾರ್ಯ ಎಂದು ಕರೆದರು, ಭಗವಾನ್

ಎಂದು ಸಂಬೋಧಿಸಿದರು.ಓಶೋ ಎಂದು ಕೂಗಿದರು. ಸೆಕ್ಸ್ ಗುರು ಎಂದು ಗೇಲಿ ಮಾಡಿದರು. ರಾಲ್ಸ್ ರಾಯ್ಸ್ ಸನ್ಯಾಸಿಎಂದು ಬಿರುದುಕೊಟ್ಟರು, ಡೈಮಂಡ್ ವಾಚಿನ ಬುದ್ಧ

ಎಂದು ಕರೆದು ನಕ್ಕರು, ಭಗವಂತ ಎಂದುಪಾದಕ್ಕೆರಗಿದರು, ಮಾನಸಿಕ ಅಸ್ವಸ್ಥ ಎಂದು ತೀರ್ಪುಕೊಟ್ಟರು.ಆದರೆ ಯಾವ ರೀತಿ ಪುಟಕ್ಕಿಟ್ಟರೆ ಮಾತ್ರ ಚಿನ್ನಕ್ಕೆ ಬೆಲೆ ಬರುತ್ತೋ ಅದೇ ರೀತಿ ಇವರಿಗೂ ಎಂದೂ ಮರೆಯದ,ಯಾರೂ ಮರೆಯದ ಹೆಸರು ಉಳಿದು ಹೋಯಿತು.ನದಿಯ ನೀರಿನ ಹರಿವಿನ ಜತೆಗೆ ಸಾಗಲು ಜೀವಂತ ಮೀನು ಬೇಕಾಗಿಲ್ಲ.. ಯಾವುದೇ ಒಂದು ಕೊಳೆತ ಕಸವೂ ಸಾಕು… ಆದರೆ ಓಶೋ ನೀರಿನ ವಿರುದ್ಧವಾಗಿ ಈಜಲು ಪ್ರಯತ್ನಿಸಿದ್ದಾರೆ…. ಮತ್ತು ಯಶಸ್ಸನ್ನ ಕೂಡಾ ಕಂಡಿದ್ದಾರೆ… ಅವರು ಈಜುವಾಗ ಒಬ್ಬರೇ ಈಸಿಲ್ಲ… ತನ್ನ ಜತೆಗೆ ಸಾವಿರಾರು ಹಿಂಬಾಲಕರನ್ನೂ ಕರೆದೊಯ್ದಿದ್ದಾರೆ… ಅದಕ್ಕೆ ಅವರಿಗೆ ನಾನು ಚಿರ ಋಣಿ.. ನಾನು ಅವರ Blind Follower ಅಂತೂ ಅಲ್ಲ… ಆದರೆ ಒಳ್ಳೆಯದು ಎಲ್ಲಿದ್ದರೂ ಸ್ವೀಕರಿಸೋದಲ್ಲಿ ತಪ್ಪಿಲ್ಲ ಅಂತ ಭಾವಿಸಿರೋನು… ನೀವು ಇದಕ್ಕೆ ಒಪ್ಪದರೆ ಇಲ್ಲಿ ನಿಮ್ಮ ಅನಿಸಿಕೆಗಳನ್ನ ಬರೆಯಿರಿ…

ಸದ್ಯಕ್ಕೆ ಇಷ್ಟು ಮಾಹಿತಿ ಸಾಕು ಆ ಮಹಾನ್ ಚೇತನದ ಬಗ್ಗೆ.. ಮುಂದಿನ ದಿನಗಳಲ್ಲಿ ಇಲ್ಲೇ ನೀವು ಅವರ ವಿಚಾರಧಾರೆ ಮತ್ತು ನುಡಿಮುತ್ತುಗಳನ್ನ ಸವಿಯಬಹುದು..

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ