ನಿನಾದ

ಜನ ಮನಕೆ ಸಾಹಿತ್ಯದ ಹೂರಣ

“””ಸಮುದ್ರ””” ಡಿಸೆಂಬರ್ 24, 2009

ದ್ವಿಗುಣಗೊಳ್ಳುತ್ತಿದೆ ದುಃಖ
ಕಡಲಾಗಿ ಹರಿದಿದೆ ಕಣ್ಣೀರು
ಸಮುದ್ರದ ಅಲೆಗಳೀಗ
ನನ್ನತ್ತಲೇ ನುಗ್ಗಿ ಬರುತ್ತಿವೆ.
ನನ್ನ ಕಣ್ಣೀರೂ ಸಮುದ್ರದೊಳೆ
ಇದೆ ಈಗ ಮೊಗದಲಿ ದುಃಖದ
ಛಾಯೆ ಮಾತ್ರ ಉಳಿದಿದೆ.
ಮರಳಿನಲಿ ಬರೆದೆ ಚಿತ್ರ
ಆಹಾ ಎಂಥ ವಿಚಿತ್ರ ಕ್ಷಣಮಾತ್ರದಲಿ
ನಶಿಸುವುದು ನೈಜವಾದದ್ದು!
ಬನಚು ಕಲ್ಲಿನ ಗಣಪನ ಮೂರ್ತಿ
ಅಲೆಗಳ ಮೂಲಕ ದಡಸೇರುವುದು
ನಾನೆತ್ತಿಕೊಳ್ಳಲು ಮುಂದಾದೆ
ಅದೇ ಅಲೆಗಳು ಮುನ್ನುಗ್ಗಿ ನನಗಿಂತ
ಮೊದಲು ಮೂರ್ತಿಯ ಸಮುದ್ರದ
ಒಳಕ್ಕೆ ಎಳೆದುಕೊಳುವವು.
ಏನು ಅಬ್ಬರ ಅಲೆಗಳದು?!
ಶಾಂತವಾಗುವುದು ಎಂದು ಈ
ಸಮುದ್ರ, ಜೀವನದ ಸಮುದ್ರ?!
ಜೀವನದ ಸಮುದ್ರ ಹೀಗೆ!
ಹಲವು ಅಲೆಗಳು ಬಂದು
ಮನಸ್ಸಿಗೆ ಅಪ್ಪಳಿಸುವವು….!

BY-ಅನೀಶ್ ಪಿ ವಿ

Advertisements