ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ಅಗಲಿದ ಚೇತನ – ಬೇಸರಿಸಿದ ಜನಮನ ಜನವರಿ 18, 2010

ಕೆ.ಎಸ್ ಅಶ್ವತ್ಥ್

ಸುಮಾರು 370ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ, ಕಳೆದ ಹಲವು ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ,  ಸಾಮಾಜಿಕ,  ಸಾಂಸಾರಿಕ ಪಾತ್ರಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ನಿಂತಿರುವ ನಮ್ಮೆಲ್ಲರ ಅಚ್ಚು ಮೆಚ್ಚಿನ ಹಿರಿಯ ನಟ ಕೆ.ಎಸ್ ಅಶ್ವತ್ಥ್ ನಮ್ಮನ್ನೆಲ್ಲ ಅಗಲಿದ ದುಃಖದ ಸುದ್ದಿ ಬಂದಿದೆ. ತಂದೆ ಅಂದರೆ ಇವರಂತೆ ಇರಬೇಕು ಅನ್ನುವ ಹಾಗೇ ತಂದೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದ ಇವರು ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಮೊನ್ನೆಯಷ್ಟೇ ವಿಷ್ಣುವರ್ಧನ್,  ಗಾಯಕ ಅಶ್ವಥ್ ಅವರನ್ನು ಕಳೆದುಕೊಂಡು ಬಡವಾಗಿದ್ದ ಕನ್ನಡ ಚಿತ್ರರಂಗಕ್ಕೆ ಇದು ಬರ ಸಿಡಿಲಿನಂತೆ ಎರಗಿದೆ. ಅವರು ಅಭಿನಯಿಸಿದ ಎಲ್ಲ ಚಿತ್ರಗಳಲ್ಲಿನ ಪಾತ್ರಗಳಿಗೂ ಜೀವ ತುಂಬಿದ ಅವರನ್ನು ಕೇವಲ ಚಾಮಯ್ಯ ಮೇಷ್ಟ್ರು ಎನ್ನುವುದು ಎಷ್ಟು ಸರಿ?(ನಿಮ್ಮ ಅಭಿಪ್ರಾಯವನ್ನು ಕಮೆಂಟ್ನಲ್ಲಿ ತಿಳಿಸಿ ಯಾ ಮಿಂಚಂಚೆ ಕಳುಹಿಸಿ.)  ಅದೇನೇ ಇರಲಿ, ಅಗಲಿದ ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

Advertisements