ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ನೆನಪಿನಂಗಳದಲ್ಲಿ… ಅಕ್ಟೋಬರ್ 7, 2010

ಅರಳುವ ಹೂವುಗಳ ಜೊತೆಯಲ್ಲಿ
ಅರಳುತಿರುವ ನನ್ನ ಸುಂದರ ಮನಸು
ಅಂತರಾಳದಲಿ ಹುದುಗಿರುವ
ನೆನಪುಗಳನು ಕೆದಕಿದೆ.

ಅದೆಂದೋ ಆದ ಘಟನೆ
ಕಣ್ಣಂಚಿನಲಿ ನರ್ತಿಸುತ್ತಿದೆ
ಮೂರಗಲ ಮನಸಿನಲಿ
ಊರಗಲ ಕನಸುಗಳ ಹಾಸಿ.

ಅಭಯ ನೀಡಿದವರ ನೆನಪು
ಧೈರ್ಯ ತುಂಬಿದವರ ನೆನಪು
ಸುಮಧುರ ಬಾಂಧವ್ಯ ಬೆಸೆದ
ಸಹೋದರಿಯ ನೆನಪು…
ನಿಟ್ಟುಸಿರಿನಲಿ ಪಟಬಿಚ್ಚಿ ತೇಲುತ್ತಿದೆ.

ಶಾಲೆ, ಕಾಲೇಜಿನಲಿ ಕಳೆದ ಕ್ಷಣಗಳ
ಸವಿನೆನಪು, ಬಾನಂಗಳದಲಿ
ಚಿತ್ತಾರ ಮೂಡಿದಂತೆ ಚಿಗುರೊಡೆದಿದೆ
ಅಕ್ಕರೆಯ ಅಪ್ಪುಗೆಯನು ನೀಡಿ.

ಶಾಂತವಾಗುತ್ತಿದೆ ಮನಸು..ನೆನಪೆಂಬ
ಸಂಕೋಲೆಗಳ ಕೊಂಡಿಗಳನು ಕಳಚುತ್ತಾ,
ಸುಮ್ಮನೆ ಕುಳಿತಿದ್ದೇನೆ ನಾನು
ಏನೂ ಮಾಡಲಾಗದಂತೆ…
ಹಳೆಯ ನೆನಪುಗಳ ಜೊತೆ ಹರಟುತ್ತಾ.

 

Advertisements
 

ಪ್ರಕೃತಿ ಮಾರ್ಚ್ 28, 2010

Filed under: ಅನಿನಾದ-ಕವನಗಳು — ಅನಿಶ್ ಪಿ ವಿ @ 1:25 ಅಪರಾಹ್ನ
Tags: , , , , ,

ಕೈಗೆಟುಕದ ಕಾಮನಬಿಲ್ಲಿಗೆ
ಬಣ್ಣಗಳ ತೋರಣ
ಬಾನಂಚಿನಲಿ ಪ್ರಕೃತಿಯ ಹೂರಣ

ಬೆಳಗು ಬೈಗುಗಗಳಲ್ಲಿ ಏರಲಾರದ ಕಡೆಗೆ ಏರಿ
ಮೂಡಿಸುತ್ತಾನೆ ಸೂರ್ಯ ಚಿತ್ತಾರ
ಬೆಳಕಿನ ಕಿರಣಗಳು ಹನಿಚೆಲ್ಲುವೆಲೆಗಳ
ನಡುವೆ ನುಸುಳಲು ನಡೆಸಿದೆ ಹುನ್ನಾರ.

ಎಳವೆಯ ಕೂಸುಗಳು ಜಡಜಗತ್ತ ಭೇಧಿಸಲು
ಅಳುತಲೇ ನಡೆಸಿವೆ ತಯಾರಿ
ಇವೆಲ್ಲದರ ನಡುವೆ ನಾನೂ ಇದ್ದೇನೆ
ಮಾಡುತ್ತಾ ಯೋಚನೆಯ ಮೇಲೆ ಸವಾರಿ.