ನಿನಾದ

ಜನ ಮನಕೆ ಸಾಹಿತ್ಯದ ಹೂರಣ

“””ಸಮುದ್ರ””” ಡಿಸೆಂಬರ್ 24, 2009

ದ್ವಿಗುಣಗೊಳ್ಳುತ್ತಿದೆ ದುಃಖ
ಕಡಲಾಗಿ ಹರಿದಿದೆ ಕಣ್ಣೀರು
ಸಮುದ್ರದ ಅಲೆಗಳೀಗ
ನನ್ನತ್ತಲೇ ನುಗ್ಗಿ ಬರುತ್ತಿವೆ.
ನನ್ನ ಕಣ್ಣೀರೂ ಸಮುದ್ರದೊಳೆ
ಇದೆ ಈಗ ಮೊಗದಲಿ ದುಃಖದ
ಛಾಯೆ ಮಾತ್ರ ಉಳಿದಿದೆ.
ಮರಳಿನಲಿ ಬರೆದೆ ಚಿತ್ರ
ಆಹಾ ಎಂಥ ವಿಚಿತ್ರ ಕ್ಷಣಮಾತ್ರದಲಿ
ನಶಿಸುವುದು ನೈಜವಾದದ್ದು!
ಬನಚು ಕಲ್ಲಿನ ಗಣಪನ ಮೂರ್ತಿ
ಅಲೆಗಳ ಮೂಲಕ ದಡಸೇರುವುದು
ನಾನೆತ್ತಿಕೊಳ್ಳಲು ಮುಂದಾದೆ
ಅದೇ ಅಲೆಗಳು ಮುನ್ನುಗ್ಗಿ ನನಗಿಂತ
ಮೊದಲು ಮೂರ್ತಿಯ ಸಮುದ್ರದ
ಒಳಕ್ಕೆ ಎಳೆದುಕೊಳುವವು.
ಏನು ಅಬ್ಬರ ಅಲೆಗಳದು?!
ಶಾಂತವಾಗುವುದು ಎಂದು ಈ
ಸಮುದ್ರ, ಜೀವನದ ಸಮುದ್ರ?!
ಜೀವನದ ಸಮುದ್ರ ಹೀಗೆ!
ಹಲವು ಅಲೆಗಳು ಬಂದು
ಮನಸ್ಸಿಗೆ ಅಪ್ಪಳಿಸುವವು….!

BY-ಅನೀಶ್ ಪಿ ವಿ

Advertisements
 

ನಿಜ ಡಿಸೆಂಬರ್ 22, 2009

ಅವಕಾಶದ ಒಳಗಿಂದ;

ಜಾರಿ ಬಂದ ನೀರು
ಮಳೆಯಾದ ಮೇಲೆ
ಭುವಿಯಲ್ಲಿ ಹರಿದಾಗ
ತಂಪಾಯಿತು ಭೂಮಿಯಲಿ|

ಕನಸುಗಳು ನನ್ನ ಮನಸಿಂದ
ಜಾರಿ ಬಂದ ಮೇಲೆ
ನನಸಾಗಿ ಹರಿದಾಗ ಜೀವನದಲ್ಲಿ
ಆಸಗಳು ಮರೆಮಾಚಿ
ಕೊನೆಯಾದವು ನನ್ನಲಿ||

ಅನ್ಯಾಯವು ತುಂಬಿ
ತುಳುಕಿದಾಗ ಜಗದಲಿ
ನ್ಯಾಯವೆಂಬ ವಿಷಯ
ಮರೆಮಾಚಿದೆ ಜನರಲಿ|||

(ನಾನು ಬರೆದ ಮೊದಲ ಕವನ ಇದು ಇದನ್ನು ನಾನು ಏಳನೇ ತರಗತಿಯಲ್ಲಿ ಬರೆದಿದ್ದೆ)

– ನಿಮ್ಮ ಅನಿನಾದ.