ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ಗೆಳೆಯಾ ಹೋಗದಿರು ಡಿಸೆಂಬರ್ 14, 2009

Filed under: ಅನಿನಾದ-ಕವನಗಳು — ಅನಿಶ್ ಪಿ ವಿ @ 12:53 ಅಪರಾಹ್ನ
Tags: , , , , ,

ಗೆಳೆಯಾ- ಹೋಗದಿರು ದೂರ

ನನ್ನೆದೆಯು ಆಗುವುದು ಭಾರ

ಸಾವಿರ ಸಂಭ್ರಮದ ಬೀಜ ಬಿತ್ತಿ

ಗಿಡವಾಗುವ ಮುನ್ನವೇ ನೀ

ಹೊರಟು ಹೋಗುವೆಯಾ?!||1||

ಚಂಚಲ ಮನಸೇ ದೂರಸರಿ

ನನ್ನಿಂದ ದೂರನಿಲ್ಲು ನನಗೇನೂ

ಹೇಳಬೇಡ ಬೇಡ, ಬರಬೇಡ

ನನಗಾತ ಬೇಕೇಬೇಕು

ಗೆಳೆಯಾ ಹೋಗುವೆಯಾ ದೂರ?!||2||

ಗೆಳೆಯಾ ಹೋಗದಿರು ದೂರ

ಕಷ್ಟಗಳ ಸಮುಚ್ಚಯಗಳೊಂದಿಗೆ

ನನ್ನೊಡನೆ ಹಂಚಿಕೋ ಸಂತೋಷ-

ಹಂಚಿಕೊಂಡಂತೆ ಹೋಗದಿರು ನೀ

ನಾನಿನ್ನ ದುಃಖಗಳಿಗೆ ಹೆಗಲು ಕೊಡುವೆ.||3||

ಗೆಳೆಯಾ ಹೋಗದಿರು ದೂರ

ಇರು ಇಲ್ಲಿಯೇ ಸುಖವಾಗಿ

ನಾನೇ ನಿನ್ನ ತೊರೆದು ತೊಲಗುತ್ತೇನೆ

ಬೇಕಾದರೆ ಆ ಕಷ್ಟಗಳ ಹೊತ್ತುಕೊಂಡು

ಗೆಳೆಯಾ ಹೋಗುವೆಯಾ ದೂರ?!||4||

Advertisements