ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ಮತ್ತೆ ನಿನಾದ.. ಏಪ್ರಿಲ್ 12, 2011

Filed under: ಚಿಂತನೆ,ನಾದ ಗಾಂಭೀರ್ಯ — ಅನಿಶ್ ಪಿ ವಿ @ 4:59 ಅಪರಾಹ್ನ

ಹೊಸ ವರುಷ ಬಂದಿದೆ, ಉಗಾದಿಯ ಬೇವು ಬೆಲ್ಲ ಸವಿದಾಗಿದೆ. ಹೊಸ ವರುಷದ ನನ್ನ ಹೊಸ ಪ್ರತಿಜ್ನೆಯನ್ನೂ ಕೈಗೊಂಡದ್ದಾಗಿದೆ. ಅದನ್ನು ತಿಳಿಸಿ ನಿಮಗೆ ತಲೆನೋವು ತರಲೆಂದೆ ನಾನಿಲ್ಲಿ ಹಾಜರು. ಬಿಡುವಿಲ್ಲದ ಈ ಬಕಿನಲ್ಲಿ ನಾವಾಗಿಯೆ ಬಿಡುವು ಮಾಡಿಕೊಳ್ಳಬೇಕೆಂಬ ಹೊಸ ಪಾಠ ಕಲಿತಿರುವ ನಾನು ಇನ್ನು ಮುಂದೆ ೧೫ ದಿನಗಳಿಗೊಮ್ಮೆಯಾದರೂ ಒಂದು ಬರಹ ಬ್ಲಾಗಿಸಲೇ ಬೇಕೆಂದು ತೀರ್ಮಾನಿಸಿದ್ದೇನೆ. ಓದುವ ತಲೆನೋವು ನಿಮಗೆ. ಮೊದಲಿನಂತೆ ನಿಮ್ಮ ಪ್ರೋತ್ಸಾಹ, ಆಶೀರ್ವಾದಗಳು ಸದಾ ಇರಲಿ. ನೀವು ಪ್ರತೀ ಬರಹಗಳನ್ನು ಓದುವಿರೆಂಬ ನಂಬಿಕೆಯೊಂದಿಗೆ
– ಅನಿನಾದ (ಅನೀಶ್ ಪಿ ವಿ)

Advertisements
 

ನವೆಂಬರ್ ಕನ್ನಡಿಗರಿಗೊಂದು ಪತ್ರ… ನವೆಂಬರ್ 17, 2010

ಓದುಗರೇ,
ನೀವು ನನ್ನ ಮೇಲೆ ಕೋಪಗೊಂಡಿರಬಹುದು ಖಂಡಿತ. ಅನುಮಾನವೇ ಇಲ್ಲ. ಕಾರಣಗಳು ಹಲವು, ಅದರಲ್ಲಿ ಕೆಲವು… ಸಮಯದ ನಂತರ ಲೇಖನಿ ಹಿಡಿದಿದ್ದೇನೆ. ಹಬ್ಬ ಹರಿದಿನಗಳು ಸರಿದು ಹೋದ ಮೇಲೆ ಇವನೇನಪ್ಪಾ ಕೊರೀತಾನೆ ಅಂದುಕೋಬೇಡಿ… ಇವಾಗ ನಾನು ಹೇಳ ಬಯಸಿರೋದು ಹಬ್ಬಗಳ ಬಗ್ಗೇನೆ. ಏನ್ ಕತೆ, ಯಾರ ಕತೆ, ಯಾವ ಹಬ್ಬ ಅಂತೆಲ್ಲ ತಿಳೀಬೇಕಾದ್ರೆ ಮುಂದೆ ಓದಿ. ನವಂಬರ್ ತಿಂಗಳು ಬಂದು ಇವತ್ತಿಗೆ ಸರೀ ೧೭ ದಿವಸ ಆಯ್ತು. ಯಾಕಪ್ಪಾ ಈ ವಿಷ್ಯ ಅಂತಂದ್ರೆ… ದಸರ ಕಳೆದು ನೋಡ್ ನೋಡ್ತಿದ್ದ ಹಾಗೇನೇ ಬಂತು ಕನ್ನಡ ರಾಜ್ಯೋತ್ಸವ. ನವೆಂಬರ್ ೧, ಕಾಗೆಗಳ ತರ ಎಲ್ರೂನೂ ಕ.. ಕ.. ಕ.. ಅಂತ ಕನ್ನಡದ ಜಪ ಮಾಡಿದ್ರು. ಹಾನ್ ನಾನೂ ಕನ್ನಡಾಭಿಮಾನಿ, ಅಚ್ಚ ಕನ್ನಡಿಗ. ಅವ್ರು ಮಾಡಿದ್ದು ತಪ್ಪು ಅಂತ ಹೇಳ್ತಿಲ್ಲ. ಇಷ್ಟೆಲ್ಲ ಮಾಡಿದ್ರಲ್ಲ ಅದಾಗಿ ಮೂರೇ ದಿವಸಕ್ಕೆ ಬಂತು ದೀಪಾವಳಿ. ಅದರ ಸಡಗರ, ಸಂಭ್ರಮದಲ್ಲಿ ಎಲ್ಲರೂ ಕನ್ನಡ ತಾಯೀನ ಮರೆತೇ ಬಿಟ್ರು. ಅದ್ರಲ್ಲೇನ್ ವಿಷೇಶ ಪ್ರತೀ ಸಲಾನೂ ಹಾಗೆ ಅಂತಿರಾ.. ಹ ಹೌದು.. ಅದೇ ನನಗೆ ಸ್ವಲ್ಪ ಬೇಸರ ತರಿಸಿರೋದು.

ಬೇಸರ ಏನಪ್ಪಾಂತಂದ್ರೆ ಈ ನವೆಂಬರ್ ೧ ರಂದು ಮಾತ್ರ ಕನ್ನಡ ರಾಜ್ಯೊತ್ಸವ ಯಾಕೆ ಆಚರಿಸಬೇಕು ಅಂತ, ನವೆಂಬರ್ ಕನ್ನಡಿಗರಾಗಿ!. ಈಗ ನೀವು “ಕನ್ನಡ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.” ಹೀಗೊಂದು ವ್ಯಾಖ್ಯಾನ ಕೊಟ್ಟರೆ ಅಚ್ಚರಿಯೇನಿಲ್ಲ. ಆದರೆ ಇದರಿಂದ ಕನ್ನಡದ ಉಳಿವಿಗೆ ಎಲ್ಲಿ ಪ್ರೋತ್ಸಾಹ ದೊರಕಿತು ಒಮ್ಮೆ ಯೋಚಿಸಿ. ಕನ್ನಡ ನಾಡಿನ ಹೆಮ್ಮೆಯ ಕನ್ನಡಿಗರಾದ ನಾವೇ ಹೀಗಾದಲ್ಲಿ ಪರದೇಶೀಯ, ಪರ ರಾಜ್ಯದ ಕನ್ನಡಿಗರ ಗತಿಯೇನೆಂದು ಯೋಚಿಸಿದ್ದೀರಾ?

ಕನ್ನಡ ನುಡಿಯನ್ನು ಆಡುಮಾತಾಗಿ ೨೫೦೦ ವರ್ಷಗಳಿಂದ ಬಳಸಲಾಗುತ್ತಿದೆ. ಕನ್ನಡ ಲಿಪಿ ಮತ್ತು ಬರೆಯುವ ಪದ್ಧತಿ ಸುಮಾರು ೧೯೦೦ ವರ್ಷಗಳ ಹಿಂದೆಯೇ ಇದ್ದಿತು. ಕನ್ನಡ ಭಾಷೆಯ ಮೊದಲ ಬೆಳವಣಿಗೆಯು ಇತರ ದ್ರಾವಿಡ ನುಡಿಗಳನ್ನು ಹೋಲುತ್ತದೆ. ನಂತರದ ಶತಮಾನಗಳಲ್ಲಿ ಕನ್ನಡ ನುಡಿಯಲ್ಲಿ, ಸಂಸ್ಕೃತ/ಸಕ್ಕದ, ಪ್ರಾಕೃತ, ಮರಾಠಿ ಮತ್ತು ಪಾರಸೀ ಮುಂತಾದ ಹೊರಭಾಷೆಗಳ ಪ್ರಭಾವದಿಂದ ಕನ್ನಡದಲ್ಲಿ ಹೆಚ್ಚು ಹೆಚ್ಚು ಆ ನುಡಿಗಳ ಪದಗಳು ಬೆರೆತು ಹೋಗಲು ಶುರುವಾಯಿತು. ಕನ್ನಡವು ದಕ್ಷಿಣ ಭಾರತದ ಮೊಲಭಾಷೆ ದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ.

ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತದೆ. ಕನ್ನಡ ಭಾಷೆಯನ್ನು ಪ್ರಮುಖವಾಗಿ ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲಾಗುತ್ತದೆ, ಮತ್ತು ಸ್ವಲ್ಪ ಮಟ್ಟಿಗೆ ಅಕ್ಕಪಕ್ಕದ ರಾಜ್ಯಗಳಲ್ಲಿ (ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಇಲ್ಲಿ ಸಹ ಉಪಯೋಗಿಸಲಾಗುತ್ತದೆ. ಅಮೆರಿಕದ ಸಂಯುಕ್ತ ಸಂಸ್ಥಾನ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಸಹ ಸಾಕಷ್ಟು ಕನ್ನಡಿಗರ ಜನಸಂಖ್ಯೆ ಇದೆ. ಇವರು ಈಚೆಗೆ ಕೆಲಸ ಹುಡುಕಿಕೊಂಡು ವಲಸೆ ಹೋದವರು. ಇ೦ದು ಕನ್ನಡವು ಮಲ್ಲಿಗೆಯ೦ತೆ ಅರಳಿ ತನ್ನ ಕ೦ಪನ್ನು ಎಲ್ಲೆಡೆಯು ವ್ಯಾಪಿಸಿದೆ. ಕನ್ನಡ ಭಾಷೆ ಭಾರತ ದೇಶದ ೨೨ ಅಧಿಕೃತ ರಾಷ್ಟ್ರ ಭಾಷೆಗಳಲ್ಲಿ ಒಂದು. ಕರ್ನಾಟಕ ರಾಜ್ಯದ ಏಕೈಕ ಅಧಿಕೃತ ಭಾಷೆ ಕನ್ನಡ. ಕರ್ನಾಟಕದಲ್ಲಿ ಕನ್ನಡಿಗರೇ ಆದ್ಯತೆ. ಅಕ್ಟೋಬರ್ ೩೧, ೨೦೦೮ ರನ್ದು ಭಾರತ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನ ನೀಡಿದೆ. ಶಾಸ್ತ್ರೀಯ ಭಾಷೆಗೆ ಕನ್ನಡದಲ್ಲಿ “ಚೆನ್ನುಡಿ” ಎಂದೂ ಕರೆಯಬಹುದು.ಇಷ್ಟೆಲ್ಲಾ ಇತಿಹಾಸ ಇರೋ ಒಂದು ಭಾಷೆನ ಹೀಗೆ ಒಂದು ದಿನದ ಆಚರಣೆ ಮುಗಿಸಿ ಕೊಲ್ಲೋದು ಎಷ್ಟು ಸರಿ?

ಹಾನ್ ನನಗಿಲ್ಲಿ ಒಬ್ಬ ಶ್ರೇಷ್ಠ ಕನ್ನಡಾಭಿಮಾನಿ, ಖ್ಯಾತ ಬರಹಗಾರರೊಬ್ಬರನ್ನ ನೆನೆಸಿಕೊಳ್ಳಲೇ ಬೇಕು, ಅವರೇ ನಮ್ಮ ವಿಜಯ ಕರ್ನಾಟಕದ  ಖ್ಯಾತ ಅಂಕಣಕಾರರಲ್ಲೊಬ್ಬರು. ಪ್ರತೀ ರವಿವಾರ “ಪರಾಗ ಸ್ಪರ್ಶ”ದ ಸವಿ ಉಣಿಸಿಕೊಂಡು ಬರುತ್ತಿರುವ ನಮ್ಮ ಶ್ರೀವತ್ಸ ಜೋಷಿ ಅವರು. ಅವರು ಅಮೇರಿಕದಿಂದ ಕನ್ನಡಿಗರಿಗೆ, ಕನ್ನಡ ಪತ್ರಿಕೆಗೆ ಬರೆಯುತ್ತಿದಾರೆ ಎಂದರೆ ಎಷ್ಟಿರಬಹುದು ಅವರ ಕನ್ನಡ ಪ್ರೇಮ ಅಂತ ಊಹಿಸಿ. ಅವರು ಅವರ ಬಳಗದ ಕನ್ನಡಿಗರೆಲ್ಲಾ ಸೇರಿ ಅಮೆರಿಕೆಯಲ್ಲಿ ಕನ್ನಡ ಬಳಗ ಸ್ತಾಪಿಸಿದ್ದಾರೆ. ಆಗಾಗ ಕನ್ನಡ ಪರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಾರೆ. ನಿಜಕ್ಕೂ ಅವರಿಗೊಂದು ಧನ್ಯವಾದ ಹೇಳಲೇ ಬೇಕು… ಧನ್ಯವಾದಗಳು ಸರ್.

ಯಾವುದೇ ಭಾಷೆಯ ಸಾಹಿತ್ಯದ ಜನಪ್ರಿಯತೆ ಸುಶಿಕ್ಷಿತ ಮತ್ತು ಆಸಕ್ತ ಜನರಿಂದೆ ಪಡೆದ ಮನ್ನಣೆಯನ್ನು ಅವಲಂಬಿಸುತ್ತದೆ. ಆದರೆ ಕಾವ್ಯದ ನಿಜವಾದ ಜನಪ್ರಿಯತೆ ತಿಳಿದುಬರುವುದು ಅದು ಸಾಮಾನ್ಯ ಜನರ ಬಾಯಲ್ಲಿ ನಲಿದಾಗ. ಯಾವುದೇ ಸಾಹಿತ್ಯ ಪ್ರಕಾರಕ್ಕೂ ಸರ್ವಜನಮಾನ್ಯತೆ ಪಡೆಯುವುದು ಕಷ್ಟ. ಕನ್ನಡ ಸಾಹಿತ್ಯದ ಕೆಲವು ಪ್ರಕಾರಗಳು ಇಂತಹ ಮಾನ್ಯತೆಯನ್ನು ಪಡೆದಿವೆ. ಕುಮಾರವ್ಯಾಸನ ಭಾರತ ಇಂದಿಗೂ ಜನಪ್ರಿಯವಾಗಿ ಉಳಿದಿದೆ. ಭಾವಗೀತೆಗಳು ಅನೇಕ ಕನ್ನಡ ಹಾಡುಗಳನ್ನು ಜನಪ್ರಿಯಗೊಳಿಸಿ ಜನರ ಬಾಯಲ್ಲಿ ಓಡಾಡುತ್ತಿವೆ. ಅಂತೆಯೇ ಎಲ್ಲಾ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವ ನಾವು ಕನ್ನಡ ಹಬ್ಬವನ್ನೂ ವಿಜ್ರಂಭಣೆಯಿಂದ ಆಚರಿಸುತ್ತೇವೆ. ಆದರೆ ಅದು ನವೆಂಬರ್ ತಿಂಗಳ ಹಬ್ಬವಾಗದೆ ವರುಷವಿಡೀ ಹರುಷ ತರುವ ಹಬ್ಬವಾಗಲಿ. ನಮ್ಮ ಕೈಲಾದಷ್ಟು ಕನ್ನಡ ಮಾತನಾಡೋಣ, ಕನ್ನಡ ಉಳಿಸಿ ಬೆಳೆಸೋಣ.

 

ಓಣಮ್ ‌- ಅತ್ಯಂತ ಪುರಾತನ ಹಬ್ಬ ಆಗಷ್ಟ್ 23, 2010

ಓದುಗರಿಗೆಲ್ಲಾ ಓಣಮ್ ಹಬ್ಬದ ಶುಭಾಷಯಗಳು.

ಓಣಮ್ ‌ ದಕ್ಷಿಣ ಭಾರತದ ಕೇರಳರಾಜ್ಯದಲ್ಲಿ ನಡೆಯುವ ಅತಿದೊಡ್ಡ ಹಬ್ಬವಾಗಿದೆ. ಈ ಹಬ್ಬವನ್ನು ಮಲಯಾಳೀ ಪಂಚಾಂಗದ ಮೊದಲ ತಿಂಗಳು ಚಿಂಗಮ್(ಆಗಸ್ಟ್-ಸೆಪ್ಟೆಂಬರ್) ತಿಂಗಳಿನಲ್ಲಿ, ಪುರಾಣಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಹತ್ತು ದಿನಗಳವರೆಗೆ ಸಡಗರದಿಂದ ಜರುಗುವ ಈ ಹಬ್ಬವು ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದೆ. ತುಂಬಾ ಕ್ಲಿಷ್ಟ ವಿನ್ಯಾಸದ ಪುಷ್ಪ ಚಿತ್ತಾರಗಳು, ಬಗೆ ಬಗೆಯ ಭಕ್ಷ್ಯಗಳು, ಹಾವು ದೋಣಿಯಾಟದ ಸ್ಪರ್ಧೆಗಳು, ಕೈಕೊತ್ತಿಕಲಿ ನೃತ್ಯ – ಇವೆಲ್ಲ ಈ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಈ ಹಬ್ಬಕ್ಕಾಗಿ ಇಲ್ಲಿನ ಜನರು ಹೊಸಬಟ್ಟೆಗಳನ್ನು ತೊಡುವುದು ವಾಡಿಕೆ. ಪುರುಷರು ಅಂಗಿ ಮತ್ತು ಮುಂಡು ಎಂದು ಕರೆಯಲಾಗುವ ಸ್ಕರ್ಟ್ ತರದ ಉಡುಪನ್ನು(ಪಂಚೆ)ಧರಿಸಿದರೆ,ಮಹಿಳೆಯರು ಅದೇ ತರಹದ ಮುಂಡುವಿನ ಮೇಲೊಂದು ಚಿನ್ನದ ಬಣ್ಣದ ನರಿಯತ್ತು ಎಂದು ಕರೆಯಲಾಗುವ ಮೇಲಂಗಿಯನ್ನು ತೊಟ್ಟು ಸಂಭ್ರಮಿಸುತ್ತಾರೆ. ಬಾಲಕಿಯರು ಪಾವಡ ವೆಂಬ ಲಂಗ, ಮೇಲೊಂದು ರವಿಕೆಯನ್ನು ತೊಟ್ಟು ಸಡಗರದಿಂದ ಓಡಾಡುತ್ತಿರುತ್ತಾರೆ. ಓಣಂ ಕೇರಳದ ಸುಗ್ಗಿಯ ಹಬ್ಬವೂ ಹೌದು.

ಮಹತ್ವ: ಓಣಂ, ಆಧುನಿಕ ಕಾಲಮಾನದಲ್ಲಿಯೂ ಉಳಿಸಿ, ಆಚರಿಸಿಕೊಂಡು ಬರಲಾಗುತ್ತಿರುವ ಅತ್ಯಂತ ಪುರಾತನ ಹಬ್ಬವಾಗಿದೆ. ಭತ್ತದ ಸುಗ್ಗಿಯ ಸಂಭ್ರಮ ಮತ್ತು ಮಳೆಗಾಲದ ಹೂಫಸಲು – ಇವೆರಡರ ಸಂಗಮದ ಕುರುಹಾಗಿ ಮತ್ತು ಅರಸ ಮಹಾಬಲಿಯು ಪಾತಾಳಲೋಕದಿಂದ ಭೂಮಿಗೆ ವಾರ್ಷಿಕ ಭೇಟಿಯ ನೆನಪಿನಲ್ಲಿ, ಈ ಹಬ್ಬವನ್ನು ಆಚರಿಸುತ್ತಾರೆ. ಅನಾದಿ ಕಾಲದಿಂದಲೂ ಅರಸ ಮಹಾಬಲಿಯನ್ನು ಕೇರಳದ ಜನತೆ ಆರಾಧಿಸುತ್ತ ಬಂದಿರುವುದರಿಂದ ಓಣಂ ಹಬ್ಬಕ್ಕೆ ಅದರದ್ದೇ ಆದ ವಿಶಿಷ್ಟತೆ ಇದೆ.

ಪುರಾಣ ಐತಿಹ್ಯಗಳ ಪ್ರಕಾರ, ಮಹಾಬಲಿ ಚಕ್ರವರ್ತಿಯ ಕಾಲದಲ್ಲಿಯೇ ಕೇರಳವು ಸುವರ್ಣಯುಗಕ್ಕೆ ಸಾಕ್ಷಿಯಾಗಿತ್ತು. ಅವನ ರಾಜ್ಯಭಾರದ ಸಮಯದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಂತಸ, ನೆಮ್ಮದಿ ಮತ್ತು ಸಂತೃಪ್ತಿಯಿಂದಿದ್ದು, ಅರಸನೂ ಕೂಡ ಅವರೆಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾಗಿ ತಿಳಿದು ಬರುತ್ತದೆ. ಈ ಎಲ್ಲ ವಿಶೇಷತೆಗಳ ಹೊರತಾಗಿಯೂ ಮಹಾಬಲಿ ಚಕ್ರವರ್ತಿಯಲ್ಲಿ ಒಂದು ನ್ಯೂನತೆ ಇತ್ತು. ಅವನು ಅಹಂಕಾರಿಯಾಗಿದ್ದ ಇಷ್ಟೆಲ್ಲದರ ನಡುವೆಯೂ ಮಹಾಬಲಿ ತನ್ನ ಒಳ್ಳೆಯ ಗುಣಗಳ ಫಲವಾಗಿ ದೇವರಿಂದ ವರ ಪಡೆದುಕೊಂಡಿದ್ದ -ವರ್ಷಕ್ಕೊಮ್ಮೆ ಅವನು ತೀರಾ ಆತ್ಮೀಯರಾಗಿದ್ದ ತನ್ನ ಜನರನ್ನು ಭೇಟಿಯಾಗಲು ಸಾಧ್ಯವಿತ್ತು. ಅವನು ಭೂಲೋಕವನ್ನು ಭೇಟಿ ಮಾಡುವ ಆ ದಿವಸವನ್ನೇ ಅಲ್ಲಿ ಓಣಂ ಆಗಿ ಪ್ರತಿ ವರ್ಷವೂ ಆಚರಿಸುತ್ತಾರೆ. ಅಲ್ಲಿನ ಜನರು ಈ ಹಬ್ಬವನ್ನು ತಮ್ಮ ಪ್ರೀತಿಪಾತ್ರ ಅರಸನೆಡೆಗೆ ತಮಗಿರುವ ಅಭಿಮಾನ ಮತ್ತು ಸಂತಸವನ್ನು ಕೃತಜ್ಞತಾಪೂರ್ವಕವಾಗಿ ವ್ಯಕ್ತಪಡಿಸಲು ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಾರೆ.

ಹತ್ತು ದಿನಗಳ ಕಾಲ ಜರುಗುವ ಈ ವಿಶೇಷ ಉತ್ಸವದಲ್ಲಿ ಕೇರಳದ ಸಾಂಸ್ಕೃತಿಕ ವೈಭವವೆಲ್ಲ ಮೈದಾಳಿರುತ್ತದೆಯಲ್ಲದೆ, ಜನರ ಉತ್ಸಾಹ, ಸಂಭ್ರಮಗಳು ಮುಗಿಲು ಮುಟ್ಟಿರುತ್ತವೆ. ಓಣಂ ಉತ್ಸವಾಚರಣೆಯ ಅತ್ಯಂತ ಆಕರ್ಷಣೀಯ ಅಂಶವೆಂದರೆ ತಿರುಓಣಂನ ದಿವಸ ತಯಾರಿಸಲಾಗುವ ‘ಓಣಸಾದ್ಯ’ ಎಂಬ ಅದ್ಭುತ ತಿನಿಸು. ಇದು 9 ತರದ ಭೋಜನವಾಗಿದ್ದು, 11 ರಿಂದ 13 ಬಗೆಯ ತರಾವರಿ ಖಾದ್ಯಗಳನ್ನು ಹೊಂದಿರುತ್ತದೆ. ಓಣಸಾದ್ಯವನ್ನು ಬಾಳೆಯ ಎಲೆಗಳ ಮೇಲಿಟ್ಟು ಬಡಿಸಲಾಗುತ್ತದೆ ಮತ್ತು ಜನರು ಕೂಡ ನೆಲದ ಮೇಲೆ ಹಾಸಿದ ಚಾಪೆಗಳ ಮೇಲೆ ಕೂತು ಈ ಭೋಜನವನ್ನು ಸವಿಯುತ್ತಾರೆ.

ಓಣಂ ಉತ್ಸವದ ಮತ್ತೊಂದು ಮೋಡಿಮಾಡುವ ಅಂಶವೆಂದರೆ ‘ವಲ್ಲಂಕಳಿ’ ಎನ್ನುವ ಹಾವು ದೋಣಿ ಪಂದ್ಯ. ಈ ಪಂದ್ಯವನ್ನು ಪಂಪಾ ನದಿಯಲ್ಲಿ ಆಯೋಜಿಸಲಾಗುತ್ತದೆ. ಕಣ್ಮನ ಸೆಳೆಯುವಂತೆ ಸಿಂಗಾರಗೊಂಡಿರುವ ದೋಣಿಗಳಲ್ಲಿ ನೂರಾರು ನಾವಿಕರು ಕೇಕೆ ಹಾಕುತ್ತ ಕೂತು, ಮೇರೆ ಮೀರಿದ ಉತ್ಸಾಹ ಮತ್ತು ಆನಂದದಿಂದ ಹಾಡುಗಳನ್ನು ಹೇಳಿಕೊಂಡು ದೋಣಿ ನಡೆಸುವುದನ್ನು ನೋಡಲು ಅಸಂಖ್ಯಾತ ಜನ ನೆರೆದಿರುತ್ತಾರೆ. ಅದನ್ನು ನೋಡುವುದೇ ಕಣ್ಣಿಗೆ ಹಬ್ಬ.

ಓಣಂನ ದಿವಸ ‘ಓಣಕಳಿಕಾಲ್’ ಎನ್ನುವ ಆಟವನ್ನು ಗುಂಪು ಗುಂಪಾಗಿ ಆಡುವ ಸಂಪ್ರದಾಯವೂ ಇದೆ. ಹೆಚ್ಚು ದೈಹಿಕ ಶ್ರಮವನ್ನು ಹಾಕಿ ಆಡಲಾಗುವ ಆಟಗಳಾದ ‘ತಳಪ್ಪಂತುಕಲಿ’ (ಇಲ್ಲಿ ಚೆಂಡನ್ನು ಬಳಸಲಾಗುತ್ತದೆ),’ ಆಮ್ಬೆಯಲ್’(ಬಿಲ್ಲಿನಾಟ),‘ಕುಟುಕುಟು’,‘ಕಯ್ಯಮಕಳಿ’ ಹಾಗೂ ‘ಅತ್ತಕಳಂ’ ಎಂಬುವ ಕಾಳಗದ ಆಟಗಳನ್ನು ಪುರುಷರು ಆಯ್ಕೆ ಮಾಡಿಕೊಳ್ಳುತ್ತಾರೆ. ಮಹಿಳೆಯರು ಹೆಚ್ಚಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅವರು ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಕುರುಹಾಗಿ ಅವರವರ ಮನೆಗಳ ಮುಂದೆ ತುಂಬಾ ಸುಂದರವೂ, ಸಂಕೀರ್ಣವೂ ಆದ ‘ಪೂಕ್ಕಳಂ’ ಎಂಬ ಪುಷ್ಪ ರಂಗವಲ್ಲಿಗಳನ್ನು ಹಾಕಿರುತ್ತಾರೆ. ಓಣಂ ಸಂದರ್ಭದಲ್ಲಿ ‘ಕೈಕೊತ್ತಿ ಕಲಿ’ ಮತ್ತು ‘ತುಂಬಿ ತುಳ್ಳಾಲ್’ ಎಂಬೆರಡು ಬಗೆಯ ಅತ್ಯಂತ ಮನೋಹರವಾದ ನೃತ್ಯಪ್ರಕಾರಗಳನ್ನು ಮಹಿಳೆಯರು ಪ್ರದರ್ಶಿಸುತ್ತಾರೆ. ಜಾನಪದ ನೃತ್ಯ ಪ್ರಕಾರಗಳಾದ ‘ಕುಮ್ಮಟ್ಟಿಕಲಿ’ ಮತ್ತು ‘ಪುಲಿಕಳಿ’ಗಳಂತೂ ಇಡೀ ಉತ್ಸವದ ಮೇರು ಆಕರ್ಷಣೆಗಳಾಗಿವೆ.

(ಕೆಲವು ಮಾಹಿತಿಗಳನ್ನು ವಿಕಿಪೀಡಿಯಾ ದಿಂದ ಸಂಗ್ರಹಿಸಲಾಗಿದೆ.)

 

ನಮಗೆಷ್ಟು ಸ್ವಾತಂತ್ರ್ಯವಿದೆ? ಆಗಷ್ಟ್ 12, 2010

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು….


೬೪ನೇ ಸ್ವಾತಂತ್ರೋತ್ಸವದ ದಿನ-“೬೩ನೇ ಸ್ವಾತಂತ್ರ್ಯ ದಿನಾಚರಣೆ” ಬಂದಿದೆ. ನಮ್ಮ ನಿಮ್ಮೆಲ್ಲರಲಿ ಸಂತೋಷ ತಂದಿದೆ. ೧೫-೦೮-೧೯೪೭ರ ಬಗೆಗೆ ಮಾತು, ಚರಿತ್ರೆಯ ಇಣುಕು ನೋಟ ಎಲ್ಲವೂ ಒಂದು ದಿನದ ಆಡಂಬರ, ಬೂಟಾಟಿಕೆ ನದೆಯೋದೇ ಬಿಡಿ. ಸ್ವಾತಂತ್ರ್ಯ ಯೋಧರನ್ನು ಹೊಗಳುವ ಈ ಜನ, ಧ್ವಜವೇರಿಸಿ ವಂದಿಸುವ ಈ ಜನ ಆ ಯೋಧರಿಗೆ ನಿಜವಾದ ನಮನ ಸಲ್ಲಿಸಿದ್ದಾರ? ನಮಗೆಲ್ಲಾ ನಿಜವಾದ ಸ್ವಾತಂತ್ಯ್ರ ನೀಡಿದ್ದಾರ ಎಂದು ಯಾವತ್ತಾದರೂ ಅವಲೋಕಿಸಿದ್ದೀರಾ? ಇರಲಿಕ್ಕಿಲ್ಲ, ಎಲ್ಲರೂ ಈ ಭಂಡು ಬಾಳಿಗೆ ಒಗ್ಗಿ ಹೋಗಿರುವರೆ ವಿನಃ ಸ್ವಲ್ಪವೂ ಆಲೋಚಿಸಿಲ್ಲ.

ಹಿರಿಯರು ಹೇಳಿದರೆಂದು ಸಂಪ್ರದಾಯ ಆಚರಿಸುತ್ತೇವೆ ಕಾರಣ ತಿಳಿಯದಿದ್ದರೂ. ಕಾನೂನು ಇದೆಯಂದು ಅದರಂತೆ ನಡೆಯುತ್ತೇವೆ ಏನೆಂದು ತಿಳಿಯದಿದ್ದರೂ. ಪಠ್ಯ ಓದುತ್ತೇವೆ ಸಂಬಂಧ ಪಡದಿದ್ದರೂ. “ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ” ಅಂದಂತೆ ಅವರು ಮಾಡಿದರೆಂದು ನಾವು ಮಾಡುತ್ತೇವೆ ನಾವು ಮಾಡಿದೆವೆಂದು ಅವರು! ಇಂದಿನ ಘನ ಸರಕಾರದ ಆದೇಶಗಳು, ಕೆಲವು ಆಸುಪಾಸಿನ ಕಟ್ಟು ಕಟ್ಟಳೆಗಳು ನಮ್ಮನ್ನು ಬಂಧನದಲ್ಲಿರಿಸಿವೆ. ನೇರ ನೋಟ ಎಲ್ಲವನ್ನೂ ಚೆನ್ನಾಗಿ ತೋರಿಸುತ್ತದೆಯಾದರೂ ಇಂದಿಗೂ ಕೆಲವು ಮನೆಗಳಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ಬಾಲಕಾರ್ಮಿಕ ಪದ್ಧತಿ ಅಪರಾಧ ಆದರೂ ಕೆಲವೆಡೆ ಇನ್ನೂ ಹಾಗೆಯೇ ಇದೆ. ನಮ್ಮ ನಮ್ಮ ನ್ಯೂನ್ಯತೆಗಳು ಹಾಗೆಯೇ ಇವೆ.

ಉದಾಹರಣೆಗೆ ಶಾಲಾ ಕಾಲೇಜುಗಳು ನೇರ ಸಾಕ್ಷಿ. ಇಂದು ಮಕ್ಕಳನ್ನು ಹಲವಾರು ಕಾರಣ, ಆಸೆ, ಆಮಿಷಗಳನ್ನೊಡ್ಡಿ ಶಾಲೆಗೆ ಕರೆತರಲಾಗುತ್ತಿದೆ. ಆದರೆ ಅಲ್ಲಿ ಸಮವಸ್ತ್ರ ಕಡ್ಡಾಯ. ಬಣ್ಣ ಬಣ್ಣದ ಲೋಕದಲ್ಲಿ ಆಡಿ ನಲಿಯಬೇಕಾದ ಮಗುವಿನ ಸ್ವಾತಂತ್ರ್ಯ ಕಸಿದಂತಲ್ಲವೇ? ಇಂದಿನ ಕಾಲೇಜುಗಳಲ್ಲೂ ಹಾಗೆ- ಭಾರತದ ಪ್ರಜೆಗೆ ಸರಕಾರವೇ ವಾಹನ ಓಡಿಸಲು ಬೇಕಾದ ಅನುಮತಿ ನೀಡುತ್ತದೆ. ಆದರೆ ಕಾಲೇಜಿನ ಆಡಳಿತ ಮಂಡಳಿ ಅದನ್ನು ಕಸಿದುಕೊಳ್ಳುತ್ತದೆ ಎಂದರೆ ಇದುವೇ ನಮಗೆ ದೊರೆತ ಸ್ವಾತಂತ್ರ್ಯ? ಮನೆಯಲ್ಲಿ ಹೆತ್ತವರ ಆಸೆಗಳನ್ನೂ ಮಕ್ಕಳು ಈಡೇರಿಸಬೇಕು. ಅವೋ ಸಾಮಾನ್ಯ ಅಸೆಗಳಲ್ಲ-”ಮಗ ನೀನು ಡಾಕ್ಟರ ಯಾ ಇಂಜಿನಿಯರ್ ಆಗು” ಎಂಬ ಕಟ್ಟುಪಾಡು.

ನಮ್ಮಲ್ಲಿ ಮಾತು, ಘೋಷಣೆಗಳಿಗೆನೂ ಕಡಿಮೆಯಿಲ್ಲ ಆದರೆ ಅವುಗಳನ್ನು ನಾವೆಲ್ಲಿ ಕಾರ್ಯಗತ ಮಾಡಿದ್ಹೇವೆ? ಮನ ಸಾಕ್ಷಿಗೆ ಸರಿಯಾಗಿ ಮತ ಚಲಾಯಿಸಲೂ ಬಿಡದ ರಾಜಕಾರಣಿಗಳು ಅರಾಜಕತೆ ಮೆರೆಯುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಕಡ್ಡಾಯ ಎನ್ನುವ ಅಧಿಕಾರಿ ಧುರೀಣರು ಫೋನಿನಲ್ಲೇ ಆಚರಣೆ ಮುಗಿಸಿ ಬಿಡುತ್ತಾರೆ. ಚುನಾವಣ ಭಾಷಣಗಳಿಗೆ ತಪ್ಪದೆ ಬರುವ ನಾಯಕರು ನಮ್ಮ ಸಮಸ್ಯೆ ಆಲಿಸಲು ಬರುವುದೇ ಇಲ್ಲ. ಮೇಜಿನಡಿಯಲ್ಲಿ ಕೈ ಇಟ್ಟು ಬಿಸಿ ಮಾಡಿಕೊಳ್ಳುವ ಚಾಲಾಕಿ ಜನಸೇವಕರು ಉಚಿತ ಸೇವೆಗಳನ್ನು ಖಚಿತ ರೇಟಿಗೆ ಮಾಡಿಕೊಡುತ್ತಾರೆ. ಸರಕಾರೀ ದವಾಖಾನೆಗಳಲ್ಲಿ ದುಡ್ಡಿದ್ದರೆ ಮಾತ್ರ ಮದ್ದು. ಹೇಳುತ್ತಾ ಹೋದರೆ ಬರುವ ಸ್ವಾತಂತ್ರ್ಯೋತ್ಸವದ ವರೆಗೂ ಮುಗಿಯಲಿಕ್ಕಿಲ್ಲ. ಇವನ್ನೆಲ್ಲ ನೆನಪಿಸೋದೆ ನನ್ನ ಈ ಬಾರಿಯ ಸ್ವಾತಂತ್ರ್ಯೋತ್ಸವದ ಉಡುಗೊರೆ . ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ಪರಿಹಾರ ಇದೆಯಂತೆ. ಹಾಗಾದರೆ ಮೇಲಿನ ಸಮಸ್ಯೆಗಳಿಗೆ ಪರಿಹಾರ ಏನು?!

ನಮ್ಮ ರಾಷ್ಟ್ರಗೀತೆಯ ಮೂಲ ಸಾಹಿತ್ಯ

” ಜನ ಗನ್ ಮನ ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ
ಪಂಜಾಬ ಸಿಂಧು ಗುಜರಾತ್ ಮರಾಠ
ದ್ರಾವಿಡ ಉತ್ಕಲ ಬಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ
ಉಚ್ಛಲ ಜಲಧಿ ತಿರಂಗ
ತುಬ್ ಶುಭ ನಾಮೇ ಜಾಗೆ
ತುಬ್ ಶುಭ ಆಶಿಶ ಮಾಂಗೆ
ಗಾಹೇ ತುಬ್ ಜಯ ಗಾತ
ಜನ ಗನ್ ಮಂಗಲ ದಾಯಕ್ ಜಯ್ ಹೇ
ಭಾರತ ಭಾಗ್ಯ ವಿಧಾತಾ
ಜಯೆ ಹೇ ! ಜಯೆ ಹೇ ! ಜಯೆ ಹೇ !
ಜಯೆ, ಜಯೆ, ಜಯೆ, ಜಯೆ ಹೇ “

ಸ್ಪುಟ ಹಿಂದಿ ಸಾಹಿತ್ಯ – ಯಾರಿಂದು ಸರಿಯಾಗಿ ರಾಷ್ಟ್ರ ಗೀತೆ ಹಾಡಬಲ್ಲರು?!

 

ಸ್ನೇಹ ಆಗಷ್ಟ್ 1, 2010

ನಮಸ್ಕಾರ….
ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.

ಗೆಳೆತನದ ಅ ಆ ಇ..

ಮಾನವ ಜೀವನದ ಮೊದಲ ಹೆಜ್ಜೆಯೇ ಗೆಳೆತನ ಯಾ ಸ್ನೇಹ. ನಮಗೆ ಅರಿವಿಲ್ಲದೆಯೇ ನಮ್ಮ ಸುತ್ತಲಿನ ಗಾಳಿ, ನೀರು, ಮರ ಮುಂತಾದ ಸಾಮಾನ್ಯ ವಸ್ತುಗಳ ಜೊತೆ ನಮ್ಮ ಗೆಳೆತನ ಆಗಿರುತ್ತೆ. ಸ್ನೇಹ ಅಂದ್ರೆ ಏನು ಅಂತ ಈಗ ಯಾರಿಗೂ ಗೊತ್ತಿಲ್ಲ ಕಣ್ರೀ. ಎಲ್ಲಾರೂ ಸುಂಸುಮ್ನೆ ಗೆಳೆತನ, ಸ್ನೇಹ ಅಂತ ನಾಟಕ ಮಾಡ್ತಾರೆ. ಆಮೇಲೆ ಎದೆಗೆ ಚೂರಿ ಹಾಕಿ ಹೊರಟು ಹೋಗ್ತಾರೆ. ಆದ್ರೆ ಸ್ನೇಹ ಯಾವತ್ತೂ ಸಾಯಲ್ಲ. ಅದಕ್ಕೆ ಕೊನೆಯಿಲ್ಲದ ಸರಪಳಿ ಅಂತಾನೂ ಕರೀತಾರೆ. ಮನಸ್ಸೆಂಬುದು ನೀರಿದ್ದಂತೆ. ಅಲ್ಲಿ ಭಾವನೆಗಳು ಹರಿದಾಡ್ತಾವೆ, ಪ್ರೀತಿ ತುಂಬಿರುತ್ತೆ. ಮನಸ್ಸಿಗೆ ನೋವಾದಾಗ ಭಾವನೆಗಳು ಹೊರಗೆ ಬರ್ತಾವೆ. ಅಂಥ ಭಾವನೆಗಳನ್ನ ಹಂಚಿಕೊಂಡು ಗೆಳಯನ ಸಮಸ್ಯೆಗಳಿಗೆ ಪರಿಹಾರ ಇತ್ತು ಬೆನ್ನುತಟೋನೆ ನಿಜವಾದ ಸ್ನೇಹಿತ.

ನಮ್ಮಲ್ಲಿ ಆಸೆ ಇರಬೇಕು ಕಣ್ರೀ ಆದ್ರೆ ಅದು ಅತಿ ಆಸೆ ಆಗಬಾರದು. ನಮ್ಮ ಸ್ವಾರ್ತಕ್ಕಾಗಿ ಇನ್ನೊಬ್ಬನಿಗೆ ಮೋಸ ಮಾಡಬಾರದು. ಎಲ್ಲರನ್ನು ಪ್ರೀತಿಸಬೇಕು ಹಾಗೂ ಸಮಾನರಾಗಿ ಕಾಣಬೇಕು. ನಮ್ಮ ಈ ಎಲ್ಲ ಮನೋಭೂಮಿಕೆಗೆ ತಕ್ಕಂತೆ ನಮ್ಮ ಗುರಿ ಇರಬೇಕು. ಗೌರವವನ್ನು ಕೊಟ್ಟು ತೆಗೆದುಕೊಳ್ಬೇಕು. ಜೀವನ ಅನ್ನೋದೂ ಒಂದು ಕಾಲೇಜು ಕಣ್ರೀ. ಆದ್ರೆ ಇಲ್ಲಿ ಪರೀಕ್ಷೆ ಮುಗಿದಮೇಲೆ ಪಾಠಕಲೀತಿವಿ. ಹಾಗಾಗಿ ಗೆಳೆತನ ಆದ್ಮೇಲೆ ಜಗಳ ಕಾಯೋಕಿಂತ ಒಬ್ಬ ಒಳ್ಳೆ ಗೆಳೆಯರನ್ನೇ ಅರಿಸಿಕೊಲ್ಲೋದು ಜಾಣರ ಗುಣ ಅಲ್ವಾ?

ಭಾರತದ ಪುರಾಣವನ್ನು ಓಮ್ಮೆ ತಿರುವಿದಾಗ ಎರಡು ಬಿಡಿಸಲಾಗದ ಸ್ನೇಹವನ್ನು ಕಾಣಬಹುದು. ಮಹಾಭಾರತದಲ್ಲಿ ಕಂಡುಬರುವ ಧುರ್ಯೋಧನ ಮತ್ತು ಕರ್ಣ ಇವರಿಬ್ಬರ ಸ್ನೇಹ ಹೇಗಿರುತ್ತದೆ ಎಂದರೆ ಒಮ್ಮೆ ಕರ್ಣ ಧುರ್ಯೋಧನನ ಪತ್ನಿಯ ಜೊತೆ ಪಗಡೆಯಾಡುವ ಸಂಧರ್ಭದಲ್ಲಿ ಅನಿವಾರ್ಯವಾಗಿ ಆಕೆಯನ್ನು ಹಿಡಿಯಲು ಹೋಗಿ, ಆಕೆಯ ಸರ ಕಿತ್ತು ಮಣಿಗಲೆಲ್ಲಾ ಚೆಲ್ಲಾಪಿಲ್ಲಿಯಾಗುತ್ತವೆ ಆ ಸಂಧರ್ಭದಲ್ಲಿ ಅಲ್ಲಿಗೆ ಧುರ್ಯೋಧನ ಬರುತ್ತಾನೆ. ಬಂದವನು ಒಂದು ಸ್ವಲ್ಪವೂ ಅನುಮಾನಿಸದೆ ನಾನು ಮಣಿಗಳನ್ನು ಆಯ್ದು ಕೊಡಲೇ ಎಂದು ಪ್ರಶ್ನಿಸುತ್ತಾನೆ. ಆಗ ಕರ್ಣ ಧುರ್ಯೋಧನನಿಗೆ ರಾಜ ನನ್ನನ್ನು ಕ್ಷಮಿಸು ಎಂದು ಕೇಳಿದಾಗ ಧುರ್ಯೋಧನ ಹೇಳುವುದು ಗೆಳಯ ನನಗೆ ನಿನ್ನಲ್ಲಿ ನಂಬಿಕೆಯಿದೆ ಬಿಡು ಭಯವನ್ನ ಎಂದು ತಾನೇ ಸಮಾಧಾನಿಸುತ್ತಾನೆ. ಅಷ್ಟರಮಟ್ಟಿಗೆ ಧುರ್ಯೋಧನನಿಗೆ ತನ್ನ ಗೆಳಯನ್ನಲ್ಲಿ ನಂಬಿಕೆಯಿರುತ್ತದೆ. ಅದೇ ರೀತಿ ಕರ್ಣನು ಕುರುಕ್ಷೇತ್ರ ಯುದ್ಧ ಆರಂಭವಾದಾಗ ಕರ್ಣನಿಗೆ ಕೃಷ್ಣ ಆತನ ಜನ್ಮರಹಸ್ಯವನ್ನು ತಿಳಿಸಿ, ನೀನು ಪಂದವರಿಗೆಲ್ಲ ಹಿರಿಯ, ಬಂದು ಪಾಂಡವರ ಜೊತೆ ಸೇರು ಎಂದಾಗ, ಕರ್ಣ ಧುರ್ಯೋಧನನನ್ನು ಬಿಟ್ಟು ಪಾಂಡವರ ಜೊತೆ ಹೋಗುವುದಿಲ್ಲ ಕಾರಣವಿಷ್ಟೇ ತಾನು ದ್ರೌಪದಿ ಸ್ವಯಂವರದಲ್ಲಿ ಬಿಲ್ಲನ್ನು ಎತ್ತಲು ಬಂದಾಗ ಕರ್ಣನನ್ನು ಸೂತ ಪುತ್ರ ಎಂಬ ಕಾರಣಕ್ಕೆ ಬಿಲ್ಲನ್ನೇರಿಸಲು ನಿರಕರಿಸಲಾಗುತ್ತದೆ. ಆಗ ಅವನಿಗೆ ಅಂಗ ದೇಶದ ರಾಜನನ್ನಾಗಿ ಮಾಡಿ ಅವನಿಗೆ ಸ್ಥಾನಮಾನ ಕಲ್ಪಿಸಿದವನು ಧುರ್ಯೋಧನ ಹೀಗೆ ಕರ್ಣನಿಗೆ ಹತ್ತು – ಹಲವು ಸಂಧರ್ಭದಲ್ಲಿ ಧುರ್ಯೋಧನ ಬೆಂಬಲವಾಗಿ ನಿಲ್ಲುತ್ತಾನೆ. ಹೀಗೆ ಮಹಾಭಾರತದಲ್ಲಿನ ಅವರಿಬ್ಬರ ಸ್ನೇಹ ಇಂದಿಗೂ ಎಂದೆಂದಿಗೂ ಅಮರವಾಗಿದೆ.

ಹಾಗೆಯೇ ಕೃಷ್ಣ- ಕುಚೆಲರ ಕತೆಯೂ ಕೂಡ ಕುಚೇಲ ಒಬ್ಬ ಬಡವನಾಗಿ ಗೆಳಯನ ಮನೆಗೆ ಸಹಾಯ ಕೇಳಲು ಬಂದು ಸ್ನೇಹಿತನಲ್ಲಿ ತನ್ನ ಬಡತನವನ್ನು ಹೇಳಿಕೊಳ್ಳಲಾಗದೆ ಇದ್ದಾಗ, ಮತ್ತು ಕೃಷ್ಣನಿಗೆಂದು ತಂದ ಅವಲಕ್ಕಿಯನ್ನು ತನ್ನ ಹರಿದ ಬಟ್ಟೆಯಲ್ಲಿ ಗಂಟು ಕಟ್ಟಿ ಕೊಂಡ್ಡಿದ್ದನ್ನು ಕಂಡು ಸ್ವತಹ ಕೃಷ್ಣನೆ ಮಿತ್ರ ನನಗೆಂದು ಏನೋ ತಂದಿರುವ ಹಾಗಿದೆಯಲ್ಲ ಎಂದು ತಾನೇ ಆ ಗಂಟನ್ನು ಬಿಚ್ಚಿ ಅದರಲ್ಲಿದ್ದ ಅವಲಕ್ಕಿಯನ್ನು ಬಿಚ್ಚಿ ತಾನು ತಿಂದು ಅದನ್ನು ನೋಡು ರುಕ್ಮಿಣಿ ಎಷ್ಟು ರುಚಿಯಾಗಿದೆ ನನ್ನ ಗೆಳೆಯ ತಂದಿರುವುದೆಂದು ರುಕ್ಮಿಣಿಯಾ ಜೊತೆ ತಿನ್ನುತಾನೆ ಅಲ್ಲದೆ ಸಹಾಯವನ್ನು ಬೇಡಲು ಬಂದು ಕೇಳದೆ ಹಿಂತಿರುಗಿದ ಕುಚೇಲನ ಬಡತನವನ್ನು ಹೋಗಲಾಡಿಸಿರುತ್ತಾನೆ

ಗೆಳೆಯರಲ್ಲಿ ಕೆಟ್ಟವರೂ ಇರ್ತಾರೆ ಒಳ್ಳೆಯವರೂ ಇರ್ತಾರೆ ಆದ್ರೆ ನಾವು ಅವರ ಹಾಗೆ ಆಗೋದು ಯಾ ಬಿಡೋದು ನಮ್ಮ ಕೈನಲ್ಲೇ ಇದೆ. ಅವರು ಏನಾದರೂ ತಪ್ಪು ಮಾಡಿದ್ರೆ ನಾವು ಅವರಿಗೆ ತಿಳಿಸಿ ಹೇಳಬಹುದಲ್ವ? ಅವರು ನಮಗೇನಾದರೂ ಅಂದಾಗ ಸಿಟ್ಟು ಮಾಡಿಕೊಳ್ಳದೆ ಆಲೋಚಿಸಬಹುದಲ್ವ ? ನಿಜವಾದ ಗೆಳೆಯರು ಇವನ್ನೆಲ್ಲ ಮಾಡ್ತಾರೆ. ಸಹ ಪಾಠಿಯಾಗಿರಬಹುದು, ಸಹೋದ್ಯೋಗಿಯಾಗಿರಬಹುದು, ಬಾಲ್ಯದಲ್ಲಿ ತಾಯಿಯಾಗಿರಬಹುದು, ಮುಪ್ಪಿನಲ್ಲಿ ಮೊಮ್ಮಗನಾಗಿರಬಹುದು ಅಥವಾ ಜೀವನದ ಒಂದು ಘಟ್ಟದಲ್ಲಿ ಅತ್ಮಿಯರಾಗಿ ಇಂದು ಸಂಪರ್ಕದಲ್ಲೂ ಇಲ್ಲದ ಕೆಲ ದಿನದ ಮಟ್ಟಿನ ಆತ್ಮೀಯ ಹೃದಯಿಗಳಾಗಿರಬಹುದು ಅದೇ ರೀತಿ ಒಂದು ಉತ್ತಮ ಮಾರ್ಗದರ್ಶನ ನೀಡುವವನೂ ಆತ್ಮೀಯ ಸ್ನೇಹಿತ . ಕೆಲವುಸಾರಿ ಗೆಳೆಯರು ನಮಗೆ ತಂದೆ ತಾಯಿಗಿಂತನೂ ಹೆಚ್ಚು ಹತ್ತಿರ ಆಗ್ತಾರೆ. ಹಾಗಂತ ಅತಿಯಾದರೆ ಅಮ್ರುತಾನೂ ವಿಷ ಅಲ್ವಾ? ಸ್ವಲ್ಪ ಯೋಚನೆ ಮಾಡಿ ಅಡಿ ಇಟ್ರೆ ಒಳ್ಳೇದು. ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ. ಹಾಗೇನೇ ಪ್ರೀತಿ ಗೆಳೆತನದಲ್ಲಿ ಆರಂಭಗೊಂಡು ಗೆಳೆತನದಲ್ಲಿ ಅಂತ್ಯಗೊಳ್ಳುತ್ತದೆ. ಆದರೆ ಕೆಲವು ಹುಡುಗರು, ಹುಡುಗಿಯರು ನೀಡಿದ ಸ್ನೇಹದ ಸಲುಗೆಯನ್ನು ಪ್ರೀತಿ ಎಂದು ತಿಳಿಯುತ್ತಾರೆ. ಸುಂಸುಮ್ನೆ ಏನೇನೊ ಕಲ್ಪಿಸಿಕೊಳ್ತಾರೆ. ಆದ್ರೆ ಅವರಿಗೆ ಗೆಳೆತನ, ಪ್ರೀತಿ, ಜೀವನದ ಅರ್ತಾನೆ ಗೊತ್ತಿರೋದಿಲ್ಲ. ಅವರು ಒಂದು ತಪ್ಪಿಗಾಗಿ ಹಳೆ ಗೆಳೆಯರನ್ನು ದ್ವೇಷಿಸುತ್ತಾರೆ. ಆದರೆ ಅವರನ್ನು ಇಷ್ಟಪಡುವ ಹಲವಾರು ಕಾರಣಗಳನ್ನು ಪರಿಗಣಿಸುವುದಿಲ್ಲ. ಇದೆ ಕಣ್ರೀ ಜೀವನ ಅಂದ್ರೆ ನಾವು ಅನ್ಕೊಂಡಿದ್ದು ಯಾವುದೂ ಆಗಲ್ಲ. ಎಲ್ಲಾರೂ ನಮ್ಮ ಆಸೆಗಳಿಗೆ ವಿರೋಧ ಇರುವಂತೆ ಕಾಣಿಸ್ತಾರೆ. ಆದ್ರೆ ಅವರು ಹೇಳೋದ್ರಲ್ಲೂ ಸತ್ಯ ಇರತ್ತೆ. ನಾವು ಇನ್ನೊಬ್ರನ್ನ ಹೇಗೆ ಅರ್ತ ಮಾಡ್ಕೋತೀವಿ ಅನ್ನೋದರ ಮೇಲೆ ನಮ್ಮ ಮತ್ತು ಅವರ ಸಂಭಂಧ ನಿಂತಿರತ್ತೆ. ಗುಣಾವಗುಣಗಳನ್ನು ಚರ್ಚಿಸದವನೇ ಆಪ್ತ ಸ್ನೇಹಿತ ಆಗ್ತಾನೆ.

ಇಂದಿನ ದಿನಗಳಲ್ಲಿ ಸರ್ವ ಶ್ರೇಷ್ಠ ಕ್ರಿಕೆಟಿಗ ಸಚಿನ್ ಅವರ ಸ್ವಭಾವ ಗೆಳೆತನಕ್ಕೆ ಒಂದು ಒಳ್ಳೆಯ ನಿದರ್ಶನ. ಅವರು ಎಷ್ಟೇ ಉನ್ನತ ಶಿಖರಕ್ಕೆರಿದರೂ ಅವರಿಗಿಂತ ಸಣ್ಣವರೊಂದಿಗೆ ಅವರಿರುವ ರೀತಿ ನೋಡಿ ಕಲಿಯುವನ್ತಹುದು.

ಕಾಲೇಜನ್ನೇ ತಗೊಳ್ಳಿ, ಅಲ್ಲಿ ಹಲವಾರು ಥರ ಗೆಳೆಯರಿರ್ತಾರೆ. ಅಲ್ಲಿ ಇರೋತನಕ ಜೀವದ ಗೆಳೆಯರಾಗಿ ಇರ್ತಾರೆ. ದಿನಾ ಎಸ ಎಂ ಎಸ, e-ಮೇಲ್ ಮಾಡಿಕೊಂಡೆ ಇರ್ತಾರೆ. ಸ್ವಲ್ಪ ಸಮಯದ ಬಳಿಕ ಅವರ ಗುರಿ ತಲಪೋದಕ್ಕೆ ಬೇರೆ ಆಗ್ತಾರೆ. ಆಗಲೇ ಬೇಕು ನಿಜ ಆದ್ರೆ ಆಮೇಲೆ ಒಬ್ರನ್ನ ಒಬ್ರು ಮರ್ತೆ ಬಿಡ್ತಾರೆ. ಎದುರಲ್ಲೇ ಸಿಕ್ಕು ಒಬ್ಬ ಹಾಯ್ ಅಂದ್ರೆ ಮತ್ತೊಬ್ಬ ನೀವು ಯಾರು ಅಂತ ಕೇಳ್ತಾನೆ. ಕನಿಷ್ಠ ಪಕ್ಷ ಒಂದು ಎ-ಮೇಲ್ ಕೂಡ ಇರಲ್ಲ ಆಮೇಲೆ, ಎಂತ ವಿಪರ್ಯಾಸ ಅಲ್ವ? ಏನು ಮಾಡೋದು ಈಗಿನ ಕೆಲಸದೊತ್ತದ, ಸಮಯದ ಅಭಾವ ಏನು ಬೇಕಾದ್ರೂ ಆಗಬಹುದು. ಗೆಳೆಯ ಬರ್ತಾನಂದ್ರೆ ಮನೇಲೆ ಇದ್ರೂ ಇಲ್ಲ ಅಂತ ಸುಳ್ಳು ಹೇಳೋರೂ ಇದ್ದಾರೆ. ಏನೆ ಇರಲಿ ನಾವಂತೂ ಜೀವನ ಪೂರ್ತಿ ಒಳ್ಳೆ ಸ್ನೇಹಿತರಾಗಿರೋಣ.

ನನ್ನ ಇದುವರೆಗಿನ ಜೀವನದಲ್ಲಿ ನಾನು ಕೇಳಿದ ಒಂದು ಅರ್ತಪೂರ್ಣ ಗೆಳೆತನದ ಬಗೆಗಿನ ಗೀತೆ…….

ಚಿತ್ರ: ಜಾಲಿಡೇಸ್
ಸಾಹಿತ್ಯ: ಕವಿರಾಜ್
ಸಂಗೀತ: ಮಿಕ್ಕಿ ಜೆ ಮೇಜರ್
ನಿರ್ದೇಶನ: ಎಂ.ಡಿ.ಶ್ರೀಧರ್

ರಕ್ತ ಸಂಬಂಧಗಳ ಮೀರಿದ ಬಂಧವಿದು
ಯಾವ ಬಿಂದುವಿನಲ್ಲಿ ಸಂಧಿಸಿಹುದು
ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು
ನನ್ನ ಪ್ರತಿ ನೋವನ್ನು ತನ್ನದೆಂದು
ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು

ಓ my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
ಓ my friend ನಮ್ಮ ಸ್ನೇಹವಿದು ಇರಲಿ ಶಾಶ್ವತ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸೇರಿಕೊಂಡು ನಮ್ಮ ದಾರಿ
ಬದುಕು ಎಷ್ಟು ಚೆಂದವೆಂದು ಸಾರುತಿಹುದು ಸಾರಿ ಸಾರಿ
ನೀವು ನೀವು ಅಂತ ಶುರುವಾಯ್ತು ಮೊದಲು
ಲೊ ಲೊ ಅಂತ ಈಗ ಬದಲು
ನಮ್ಮ ನಡುವೆ ಇಲ್ಲ ಕೊಂಚ ಸಂಕೋಚವೂ

ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು
ಓ my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
ಓ my friend ನಮ್ಮ ಸ್ನೇಹವಿದು ಇರಲಿ ಶಾಶ್ವತ

ಮಳೆಯು ಬರಲು ಕಾಗದಾನೇ ದೋಣಿ ಮಾಡಿ ಬಿಟ್ಟ ನೆನಪು
ನಿನ್ನ ಕಂಡು ಬಾಲ್ಯದೆಲ್ಲ ಆಟ ಮತ್ತೆ ಆಡೊ ಹುರುಪು
ತುಂಟ ತನವು ಸೇರಿ ನಮ್ಮ ಸಂಘದಲ್ಲಿ ಪಟ್ಟ ಖುಷಿಗೆ ಲೆಕ್ಕಎಲ್ಲಿ
ತಿಲಿಸೊ ಬಗೆಯೆ ಅರಿಯೆ ನಿನಗೆ ಧನ್ಯವಾದವೆ

ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು
ಓ my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
ಓ my friend ನಮ್ಮ ಸ್ನೇಹವಿದು ಇರಲಿ ಶಾಶ್ವತ

 

ಚಿತ್ರ ಪಟ – ಆಟ ಮೇ 24, 2010

ಈ ಕೆಳಗಿನ ಚಿತ್ರ ಬಹಳ ವಿಷೇಶವಾದದ್ದು. ಈವನಿಗೆಲ್ಲೊ ತಲೆಕೆಟ್ಟಿದೆ ಅಂದುಕೊಳ್ಬೇಡಿ, ಬದಲಿಗೆ ಸರಿಯಾಗಿ ಗಮನಿಸಿ.
ಚಿತ್ರದ ಮಧ್ಯಭಾಗದಲ್ಲಿರುವ ಕೂಡು ಚಿನ್ಹೆಯನ್ನೇ ನೋಡಿ, ಕೆಲ ಸಮಯದ ನಂತರ ಒಂದು ಹಸಿರು ವ್ರುತ್ತ ಸುತ್ತುತ್ತಿದೆ ಅನಿಸುತ್ತೆ… ನಂತರ, ಆ ಸುತ್ತುತ್ತಿರುವ ಹಸಿರು ವ್ರುತ್ತ ಮಾತ್ರ ಕಾಣಿಸುತ್ತೆ. ನೀವೂ ಒಮ್ಮೆ ಪ್ರಯತ್ನಿಸಿ ನೋಡಿ, ಯಾಕೆ ಹೀಗೆ ಎಂಬುದನ್ನು ವಿಷ್ಲೇಶಿಸಿ.
ಉತ್ತರ ತಿಳಿದರೆ ನನಗೂ ತಿಳಿಸಿ.

ಚಿತ್ರ ವಿ’ಚಿತ್ರ

 

ಹಾಕಿಗೆ ಬೆನ್ನು ಹಾಕಿ…ಕ್ರಿಕೆಟ್ ಶೋಕಿ… ಫೆಬ್ರವರಿ 21, 2010

Filed under: ಚಿಂತನೆ,ನಾದ ಗಾಂಭೀರ್ಯ,ವಿಮರ್ಶೆ — ಅನಿಶ್ ಪಿ ವಿ @ 5:18 ಅಪರಾಹ್ನ
Tags: , , , , ,

೨ರ ಹಸುಗೂಸಿನಿಂದ ಹಿಡಿದು ೯೨ರ ಅಜ್ಜಯ್ಯನ ವರೆಗೂ ಕಣ್ಣು ಬಾಯಿ ಬಿಟ್ಟು ನೋಡುವ ಪ್ರಸಿದ್ದ ಆಟ ಕ್ರಿಕೆಟ್ಟು. ಆಟ ಯಾವುದೇ ಇರಲಿ ಅದರ ಧ್ಯೇಯೋಧೇಶಗಳು ಒಂದೇ ಎಂಬುದು ನನ್ನ ಅಭಿಪ್ರಾಯ(ದೇಶಾದಿಗಳ ನಡುವೆ ಸಹೋದರ ಭಾವ ಬೆಳೆಸುವುದು). ಆದರೆ ಇಂದು ಕಾಲ ಬದಲಾಗಿದೆ ಆಟ ಆಟವಾಗುವ ಬದಲು ಸೇಡು, ದುರಾಸೆ, ತನ್ನತನ, ಅತಿಯಾದ ಆಸೆಗಳನ್ನು ತುಂಬಿ ಎರಡು ಮನಸುಗಳ ನಡುವಿನ ಬಾಂಧವ್ಯವನ್ನು ಕಿತ್ತೆಸೆವ ಬಾಣವಾಗಿದೆ. ಆಟಗಳ ಹಿರಿಯಣ್ಣಾ(ಭಾರತದಲ್ಲಿ) ಎಂದೆನಿಸಿರುವ ಕ್ರಿಕೆಟ್ ಬಿಟ್ಟರೆ ನಮ್ಮ ಜನಕ್ಕೆ ಬೆರಾವ ಆಟವೂ ಬೇಡ ಎಂಬುದು ಖೇದಕರ.

ಇತ್ತೀಚೆಗಂತೂ ಪರಿಸ್ತಿತಿಯ ವೈಪರಿತ್ಯತೆ ಕೈತಪ್ಪಿದೆ…ಎಂದರೆ ತಪ್ಪಿದೆ ಎನಿಸದು! ರಾಜಕಾರಣಿಗಳು, ಮಾಧ್ಯಮವೃಂದ, ವಿವೇಚನೆಯಿಲ್ಲದ ಜನ ಎಲ್ಲರೂ ಕ್ರಿಕೆಟ್ಟಿನತ್ತ ಮುಖಮಾಡಿದ್ದಾರೆ. ಅದು ತಪ್ಪಲ್ಲ. ಮೂಲತಹ ನಾನೂ ಕ್ರಿಕೆಟ್ ಅಭಿಮಾನಿ. ಆದರೆ ಬೇರೆಲ್ಲಾ ಆಟಗಳನ್ನು ಕಡೆಗಣಿಸುವುದು ಎಷ್ಟು ಸರಿ ಎಂಬುದು ನನ್ನ ವಾದ. ಟೆನ್ನಿಸ್, ಹಾಕಿ, ಕಾಲ್ಚೆಂಡು, ಕಬಡ್ಡಿ, ಬೇಸ್ ಬಾಲ್ ಮುಂತಾದವು ಆಟಗಳೇ ಅಲ್ಲವೆ? ಅಲ್ಲಿನ ಕ್ರೀಡಾಳುಗಳನ್ನು ಕಡೆಗಣಿಸಿರುವುದು ಸರಿಯೆ?

ಸಂತೋಷಕರ ಸಂಗತಿ ಎಂದರೆ ನಮ್ಮ ರಾಷ್ಟ್ರೀಯ ಆಟವಾದ ಹಾಕಿಯ ವಿಶ್ವಕಪ್ ಈ ಬಾರಿ ೨೮-ಫೆಬ್ರುವರಿಯಿಂದ ಭಾರತದಲ್ಲಿ ನಡೆಯಲಿದೆ. ಆದರೆ ಇದಕ್ಕೆ ಮಾಧ್ಯಮದವರ ಪ್ರಚಾರ, ರಾಜಕಾರಣಿಗಳ ಸಹಕಾರ ದೊರಕುತ್ತಿಲ್ಲ. ಕ್ರಿಕೆಟ್ಟಿನ ಕೇವಲ ಒಂದು ಟ್-೨೦ ಮ್ಯಾಚಿಗೆ ಕೋಟಿಗಟ್ಟಲೆ ಸುರಿಯುವ, ಒಬ್ಬ ಕ್ರಿಕೆಟಿಗನ ಬೊಕ್ಕಸಕ್ಕೆ ಲಕ್ಷಗಟ್ಟಲೆ ಸುರಿವ ಸುಸಂದರ್ಭದಲ್ಲಿ ಏನೂ ಮಾತನಾಡದ ಸರ್ಕಾರ, ವಿಶ್ವಕಪ್ ಹಾಕಿ-೨೦೧೦ ರ ಬಗೆಗೆ ಏನನ್ನೂ ಮಾಡಿಲ್ಲ… ಎನ್ನಲು ಬಹಳ ನಾಚಿಕೆಯೆನಿಸುತ್ತಿದೆ.

ಸರ್ಕಾರ ಮೂಕವೇ, ಜನಸಮೂಹ ಕುರುಡೇ, ಮಾಧ್ಯಮ ಸ್ನೇಹಿತರು ಕಿವುಡರೇ…?!!!! ಅದೇನೇ ಇರಲಿ…ನಾವಾದರೂ  ನಮ್ಮ ರಾಷ್ಟ್ರೀಯ ಆಟವನ್ನು ಬೆಳೆಸಿ ಉಳಿಸೋಣ.