ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ನೆನಪಿನಂಗಳದಲ್ಲಿ… ಅಕ್ಟೋಬರ್ 7, 2010

ಅರಳುವ ಹೂವುಗಳ ಜೊತೆಯಲ್ಲಿ
ಅರಳುತಿರುವ ನನ್ನ ಸುಂದರ ಮನಸು
ಅಂತರಾಳದಲಿ ಹುದುಗಿರುವ
ನೆನಪುಗಳನು ಕೆದಕಿದೆ.

ಅದೆಂದೋ ಆದ ಘಟನೆ
ಕಣ್ಣಂಚಿನಲಿ ನರ್ತಿಸುತ್ತಿದೆ
ಮೂರಗಲ ಮನಸಿನಲಿ
ಊರಗಲ ಕನಸುಗಳ ಹಾಸಿ.

ಅಭಯ ನೀಡಿದವರ ನೆನಪು
ಧೈರ್ಯ ತುಂಬಿದವರ ನೆನಪು
ಸುಮಧುರ ಬಾಂಧವ್ಯ ಬೆಸೆದ
ಸಹೋದರಿಯ ನೆನಪು…
ನಿಟ್ಟುಸಿರಿನಲಿ ಪಟಬಿಚ್ಚಿ ತೇಲುತ್ತಿದೆ.

ಶಾಲೆ, ಕಾಲೇಜಿನಲಿ ಕಳೆದ ಕ್ಷಣಗಳ
ಸವಿನೆನಪು, ಬಾನಂಗಳದಲಿ
ಚಿತ್ತಾರ ಮೂಡಿದಂತೆ ಚಿಗುರೊಡೆದಿದೆ
ಅಕ್ಕರೆಯ ಅಪ್ಪುಗೆಯನು ನೀಡಿ.

ಶಾಂತವಾಗುತ್ತಿದೆ ಮನಸು..ನೆನಪೆಂಬ
ಸಂಕೋಲೆಗಳ ಕೊಂಡಿಗಳನು ಕಳಚುತ್ತಾ,
ಸುಮ್ಮನೆ ಕುಳಿತಿದ್ದೇನೆ ನಾನು
ಏನೂ ಮಾಡಲಾಗದಂತೆ…
ಹಳೆಯ ನೆನಪುಗಳ ಜೊತೆ ಹರಟುತ್ತಾ.

 

Advertisements
 

ಮತ್ತೆ ಅರಳುವ ಮುನ್ನ ಸೆಪ್ಟೆಂಬರ್ 16, 2010

ಬೆಳಕು ಹರಿಯೆ ಗಿಡದಮೇಲರಳಿದ ಹೂವು

ಬೇಟೆಯ ಜಾಡು ಹಿಡಿದು ಬಂದ ಜೇನು ಹುಳ

ಜೇನ ಸಂಗ್ರಹಿಸಿ ಹೊರಟು ಹೋಯಿತು.

ಅದೇ ಹೂವ ಮೇಲಿಟ್ಟು ಚಿತ್ತ ಬಂತು ದುಂಬಿ

ಈಗಷ್ಟೇ ನೋಡುತ್ತಿತ್ತು ಅತ್ತಿತ್ತ ಪರಾಗ ಸ್ಪರ್ಶಿಸಿ

ಹಾರಿತು ತನ್ನ ಪಾಡಿಗೆ ತಾನು.

ಜನಿಸಿದ ದಿನವೇ ಮುದುಡಿ

ಕಾಲದೊಳು ಲೀನವಾಗಿ ಬಾಡಿತು ಹೂವು

ಗಿಡ ಹಿಡಿತ ಸಡಿಲಿಸಿತು, ಹೂ ಧರೆಗುರುಳಿತು.

ರಾತ್ರಿಯಲಿ ಚಂದ್ರನ ಜೊತೆ ಜೊತೆಯಲ್ಲಿ

ನಕ್ಷತ್ರಗಳೂ ಲಗ್ಗೆ ಇಟ್ಟವು ನೀಲ ಗಗನಕ್ಕೆ

ಕರಿನೆರಳ ಛಾಯೆಯ ಮರೆಮಾಚಲು.

ಇರುಳ ಬಸಿರೊಳಡಗಿರುವ ಸೂರ್ಯ

ಇಣುಕಿ ನೋಡುವನು, ಕಿರಣ ಚೆಲ್ಲುವನು

ಚಂದ್ರ ನಕ್ಷತ್ರಗಳ ಮುಚ್ಚಿ ಹಾಕಿ.

ಮೆಲ್ಲಗೆ ಉಸಿರೆಳೆದು ಖಾಲಿ

ಆಕಾಶದ ಸೂರಿನಲಿ ಅವನಗಲು

ಮತ್ತೊಂದು ಹೂ ಗಿಡದಲರಳುವುದು.

 

ಪ್ರಕೃತಿ ಮಾರ್ಚ್ 28, 2010

Filed under: ಅನಿನಾದ-ಕವನಗಳು — ಅನಿಶ್ ಪಿ ವಿ @ 1:25 ಅಪರಾಹ್ನ
Tags: , , , , ,

ಕೈಗೆಟುಕದ ಕಾಮನಬಿಲ್ಲಿಗೆ
ಬಣ್ಣಗಳ ತೋರಣ
ಬಾನಂಚಿನಲಿ ಪ್ರಕೃತಿಯ ಹೂರಣ

ಬೆಳಗು ಬೈಗುಗಗಳಲ್ಲಿ ಏರಲಾರದ ಕಡೆಗೆ ಏರಿ
ಮೂಡಿಸುತ್ತಾನೆ ಸೂರ್ಯ ಚಿತ್ತಾರ
ಬೆಳಕಿನ ಕಿರಣಗಳು ಹನಿಚೆಲ್ಲುವೆಲೆಗಳ
ನಡುವೆ ನುಸುಳಲು ನಡೆಸಿದೆ ಹುನ್ನಾರ.

ಎಳವೆಯ ಕೂಸುಗಳು ಜಡಜಗತ್ತ ಭೇಧಿಸಲು
ಅಳುತಲೇ ನಡೆಸಿವೆ ತಯಾರಿ
ಇವೆಲ್ಲದರ ನಡುವೆ ನಾನೂ ಇದ್ದೇನೆ
ಮಾಡುತ್ತಾ ಯೋಚನೆಯ ಮೇಲೆ ಸವಾರಿ.

 

ಹಾದಿ ಮಾರ್ಚ್ 15, 2010

Filed under: ಅನಿನಾದ-ಕವನಗಳು — ಅನಿಶ್ ಪಿ ವಿ @ 3:12 ಅಪರಾಹ್ನ


ನಾ ನಡೆದು ಬಂದ ಹಾದಿ
ನೂರು ನೂರು ಗಾದಿ
ಬಂದರೂ ಯುಗಾದಿ
ಸಂಭ್ರಮವಿಲ್ಲ ಮನದಿ


ಒಂದುಕಾಲನೊಂದು
ದೋಣಿಯೊಳಿಟ್ಟೆ
ಇನ್ನೊಂದನು ಬೇರೆ
ದೋಣಿಯೊಳಿಡಬಯಸಿದೆ…


ತಿಳಿಯದೆಯೆ ತಪ್ಪೆಸಗಿದ್ದೆ
ಅನುಭವಿಸುತ್ತಿರುವೆ
ನಾನೀಗ ಶಿಕ್ಷೆ-ಯಾರೂ-
ಇಲ್ಲ ನನಗೆ ಶ್ರೀರಕ್ಷೆ


ಹಬ್ಬ ಹರಿದಿನಗಳೆಂದಿಲ್ಲ
ನಡೆಯುತ್ತಲೇ ಇದ್ದೇನಲ್ಲ
ನಿಂತು ನೋಡಿದರೇನು
ಅಗೋಚರ ಮುಂದಿನದು?


ನೀವೂ ನೋಡಿರಬೇಕಲ್ಲ
ನಾನು ನಡೆಯುವುದನ್ನು
ತಲುಪಲಾರದ ಕೊನೆ ತಲುಪಲೆಂದು
ನಿಮ್ಮೂರಾಗಿಯೇ ನಡೆದದ್ದು


ಯಾವುದು ತಲುಪಲಾರದ ಕೊನೆ
ಎಂದು ನನಗೆ ಗೊತ್ತೇ ಇಲ್ಲ
ತಿಳಿಯಲೆತ್ನಿಸುವುದೂ ಇಲ್ಲ-ನಾ-
ನಡೆದೇ ತೀರುತ್ತೇನೆ ಹಾದಿ


ಎಂದಾದರೂ ಒಮ್ಮೆ
ತಲಪುವೆನು ನನ್ನ ಗುರಿ
ಆಗ ಆಚರಿಸುವೆನು
ಸಂಭ್ರಮದ ಯುಗಾದಿ

ನಿಮಗೆಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.

ನನ್ನ ಅಂತರ್ಜಾಲ ತಾಣ ವೀಕ್ಷಿಸಿ, ಅದರಲ್ಲಿ ಸದಸ್ಯರಾಗಿ COOL HALL ನಲ್ಲಿ.

 

ಹೊಸ ನಾಳೆಗೆ… ಮಾರ್ಚ್ 2, 2010

ಹೊಸ ನಾಳೆಗೆ...

ದೀಪದ ಬುಡದಲ್ಲೇ
ಕತ್ತಲೆಯಿದೆ-ಕತ್ತಲೆಯ
ಬಸಿರೊಳಗೆ ಬೆಳಕಿದೆ
ಆ ಬೆಳಕು ಹರಡುವುದು
ಹೊಸ ನಾಳೆಗೆ…

ನೀನಿತ್ತ ಮುತ್ತುಗಳ
ರಂಗೋಲಿ ಇಟ್ಟಿರುವೆ
ಭಾವಗಳ ರಂಗನ್ನು
ಅದರೊಳಗೆ ತುಂಬಿರುವೆ
ಹೊಸ ನಾಳೆಗೆ…

ನಾಳೆಯ ಹೂಗಳಿಗೆ ನೀ
ಗಂಧವಾಗಲೆಂದು ಕನಸುಗಳ
ನನ್ನೊಳಗೆ ಭಂಧಿಸಿರುವೆ
ಆ ಸ್ವಾರ್ಥ ಕನಸುಗಳಿಗೆ
ರಾತ್ರಿಯೆಲ್ಲಾ ಹಗಲಾಗಿಸಿ
ಬಣ್ಣ ತುಂಬಿದೆ

ಬರುವ ಹೊಸನಾಳೆಗೆ
ಬೆಳಕೇ ಅರಳಿ ನಿಂತ ಪರಿಗೆ
ಕತ್ತಲು ಬೆಳಕಾದ ಘಳಿಗೆ
ಹೊರಟು ನಿಂತಿದೆ ನೆರಳ ಮೆರವಣಿಗೆ
ನನ್ನೆಲ್ಲ ನೋವು-ನಲಿವುಗಳ, ಜೀವ-ಸಾವುಗಳ
ಭಾವ-ಬದುಕುಗಳ ನಾವೆಯಲಿ
ಕಾಯುತ್ತಿರುವೆ ಹೊಸ ನಾಳೆಗೆ.

 

ಕರೆ ಫೆಬ್ರವರಿ 26, 2010

ಕರೆಗೆ ಓಗೊಡುವ ನಿರೀಕ್ಷೆಯಲಿ...

ಕರೆಗೆ ಓಗೊಡುವ ನಿರೀಕ್ಷೆಯಲಿ...

ನನ್ನ ಮನಸಿನ ತುಂಬಾ ನೀನೆ ತುಂಬಿಹೆಯಲ್ಲ
ನೀನಾರ ಜೀವನದ ಭಾವಗೀತೆ|
ನನ್ನ ಮನದೊಳಗೆಲ್ಲಾ ಸುತ್ತಾಡುತಿಹೆಯಲ್ಲ
ನೀನಾವ ಹೂವಿನ ಸುಘಂದ ಮಾತೆ|
ನೀನಾರು ನನ್ನ ಮನದಾಳದಲಿ ಕುಳಿತಿರುವೆ
ನನ್ನ ಮನಸಿನ ತುಂಬಾ ನವ್ಯ ಗೀತೆ|
ಗೀತೆಯೇನದು ನನ್ನ ತಿಳಿ ಮನಸಿನಲಿ
ನವ ಭಾರತವನ್ನು ಕಟ್ಟುವಾಸೆ|
ಏನೆಂದು ಅರಿಯದೆಯೆ ಇನ್ನಷ್ಟು ಮತ್ತಷ್ಟು
ನನ್ನ ಮನ ಹುಡುಕಿಹುದು ನಿನ್ನ ಕುರುಹು|
ಇನ್ನೂ ಹುಡುಕುತಿಹೆ ನಾನಿನ್ನ ಯಾರೆಂದು
ನನ್ನ ಮನ ನೋಯಿಸುವ ಆಟ ಬೇಡ|
ಹೂಬನವು ಹಸಿರಾಗಿ ಕಾಯೆಲ್ಲ ಹಣ್ಣಾಗಿ
ಮಾಗಿರುವ ಕನಸೆಲ್ಲ ಮತ್ತೆ ಅರಳಿ|
ನನ್ನ ಮನಸಿನ ತುಂಬಾ ನಿನ್ನ ಕುರುಹಿದೆಯಲ್ಲ
ನೀನಾರ ಜೀವನದ ಭಾವಗೀತೆ?….||

 

ಅವಳು – ಸಹೋದರಿ! ಫೆಬ್ರವರಿ 14, 2010

Filed under: ಅನಿನಾದ-ಕವನಗಳು — ಅನಿಶ್ ಪಿ ವಿ @ 4:53 ಅಪರಾಹ್ನ
Tags: , , , , , ,

ಅವಳ ಅಂದವ ನೋಡಿ ಮಂಕಾದೆ
ಕಾಲೇಜಿನಲ್ಲವಳ ಗೆಳೆಯನಾದೆ
ಒಂದು ದಿನ ಅವಳಿಲ್ಲವಾದರೆ…
ಕಾಲೇಜು ಬರಿದೆನಿಸುತ್ತಿತ್ತು…

ಆಕೆ ನನ್ನನ್ನು ಸಹೋದರ ಎಂದು
ತಿಳಿದುದ.. ನಾ ತಿಳಿಯದೇ ಹೋದೆ…
ಮನದಲ್ಲೆ ನಾನಾಕೆಯ ಪ್ರೀತಿಸಿದೆ…
ಅವಳ ಸೌಂದರ್ಯವನಲ್ಲ… ಭಾವನೆಗಳನ್ನು…

ಆಕೆ ನನ್ನ ಜೊತೆ ಹರಟುತ್ತಿದ್ದಳು
ಹಲವು ವಿಚಾರಗಳ ಬಗೆಗೆ ಚರ್ಚಿಸಿ
ಪ್ರತೀ ಬಾರಿ ನಾ ಸೋತು ಗೆಲ್ಲುತ್ತಿದ್ದೆ…
ಗೆಲ್ಲುತ್ತಿದ್ದೆ ಅವಳ ಮನವನ್ನು (ನನ್ನದೇ ಕಲ್ಪನೆ)…

ಎಂದೆಂದೂ ಅವಳದೇ ಸ್ನೇಹವನ್ನು
ಉಳಿಸಿಕೊಂಡಿದ್ದಳು – ಹೇಳಿದ್ದಳು ಒಮ್ಮೆ
ಹುಡುಗಾಟವಾಡಬೇಡ ಎಳೆ ಮಗುವಿನಂತೆ…
-ಸಭ್ಯನಾಗಿರು ಅಣ್ಣಾ ಎಂದು…

ಕೊನೆಗೆ ಆಟೊಗ್ರಾಫ್ ಪುಸ್ತಕದಲ್ಲಿಯೂ
ಸಹೋದರಿ ಶುಭ ಹಾರೈಸಿದಳು ಹೃದಯತುಂಬಿ
ನಾನಾಗ ತುಂಬಾ ಸಣ್ಣವನಾಗಿದ್ದೆ… ಏನೇನೋ-
ಕಲ್ಪಿಸಿಕೊಂಡದಕ್ಕೆ ಅವಳ ಬಗೆಗೆ.

ಪ್ರೀತಿಸಿ ಆದರೆ ನೇವು ಪ್ರೀತಿಸುವವರು ನಿಮ್ಮನ್ನು ಪ್ರೀತಿಸುತ್ತಾರೆಯೇ ಎಂಬುದು ತಿಳಿದಿರಲಿ.. ಅದೇನೇ ಇರಲಿ.. ಪ್ರೇಮಿಗಳ ದಿನದ ಶುಭಾಷಯಗಳು .