ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ಸ್ನೇಹ ಆಗಷ್ಟ್ 1, 2010

ನಮಸ್ಕಾರ….
ಎಲ್ಲರಿಗೂ ಸ್ನೇಹಿತರ ದಿನದ ಶುಭಾಶಯಗಳು.

ಗೆಳೆತನದ ಅ ಆ ಇ..

ಮಾನವ ಜೀವನದ ಮೊದಲ ಹೆಜ್ಜೆಯೇ ಗೆಳೆತನ ಯಾ ಸ್ನೇಹ. ನಮಗೆ ಅರಿವಿಲ್ಲದೆಯೇ ನಮ್ಮ ಸುತ್ತಲಿನ ಗಾಳಿ, ನೀರು, ಮರ ಮುಂತಾದ ಸಾಮಾನ್ಯ ವಸ್ತುಗಳ ಜೊತೆ ನಮ್ಮ ಗೆಳೆತನ ಆಗಿರುತ್ತೆ. ಸ್ನೇಹ ಅಂದ್ರೆ ಏನು ಅಂತ ಈಗ ಯಾರಿಗೂ ಗೊತ್ತಿಲ್ಲ ಕಣ್ರೀ. ಎಲ್ಲಾರೂ ಸುಂಸುಮ್ನೆ ಗೆಳೆತನ, ಸ್ನೇಹ ಅಂತ ನಾಟಕ ಮಾಡ್ತಾರೆ. ಆಮೇಲೆ ಎದೆಗೆ ಚೂರಿ ಹಾಕಿ ಹೊರಟು ಹೋಗ್ತಾರೆ. ಆದ್ರೆ ಸ್ನೇಹ ಯಾವತ್ತೂ ಸಾಯಲ್ಲ. ಅದಕ್ಕೆ ಕೊನೆಯಿಲ್ಲದ ಸರಪಳಿ ಅಂತಾನೂ ಕರೀತಾರೆ. ಮನಸ್ಸೆಂಬುದು ನೀರಿದ್ದಂತೆ. ಅಲ್ಲಿ ಭಾವನೆಗಳು ಹರಿದಾಡ್ತಾವೆ, ಪ್ರೀತಿ ತುಂಬಿರುತ್ತೆ. ಮನಸ್ಸಿಗೆ ನೋವಾದಾಗ ಭಾವನೆಗಳು ಹೊರಗೆ ಬರ್ತಾವೆ. ಅಂಥ ಭಾವನೆಗಳನ್ನ ಹಂಚಿಕೊಂಡು ಗೆಳಯನ ಸಮಸ್ಯೆಗಳಿಗೆ ಪರಿಹಾರ ಇತ್ತು ಬೆನ್ನುತಟೋನೆ ನಿಜವಾದ ಸ್ನೇಹಿತ.

ನಮ್ಮಲ್ಲಿ ಆಸೆ ಇರಬೇಕು ಕಣ್ರೀ ಆದ್ರೆ ಅದು ಅತಿ ಆಸೆ ಆಗಬಾರದು. ನಮ್ಮ ಸ್ವಾರ್ತಕ್ಕಾಗಿ ಇನ್ನೊಬ್ಬನಿಗೆ ಮೋಸ ಮಾಡಬಾರದು. ಎಲ್ಲರನ್ನು ಪ್ರೀತಿಸಬೇಕು ಹಾಗೂ ಸಮಾನರಾಗಿ ಕಾಣಬೇಕು. ನಮ್ಮ ಈ ಎಲ್ಲ ಮನೋಭೂಮಿಕೆಗೆ ತಕ್ಕಂತೆ ನಮ್ಮ ಗುರಿ ಇರಬೇಕು. ಗೌರವವನ್ನು ಕೊಟ್ಟು ತೆಗೆದುಕೊಳ್ಬೇಕು. ಜೀವನ ಅನ್ನೋದೂ ಒಂದು ಕಾಲೇಜು ಕಣ್ರೀ. ಆದ್ರೆ ಇಲ್ಲಿ ಪರೀಕ್ಷೆ ಮುಗಿದಮೇಲೆ ಪಾಠಕಲೀತಿವಿ. ಹಾಗಾಗಿ ಗೆಳೆತನ ಆದ್ಮೇಲೆ ಜಗಳ ಕಾಯೋಕಿಂತ ಒಬ್ಬ ಒಳ್ಳೆ ಗೆಳೆಯರನ್ನೇ ಅರಿಸಿಕೊಲ್ಲೋದು ಜಾಣರ ಗುಣ ಅಲ್ವಾ?

ಭಾರತದ ಪುರಾಣವನ್ನು ಓಮ್ಮೆ ತಿರುವಿದಾಗ ಎರಡು ಬಿಡಿಸಲಾಗದ ಸ್ನೇಹವನ್ನು ಕಾಣಬಹುದು. ಮಹಾಭಾರತದಲ್ಲಿ ಕಂಡುಬರುವ ಧುರ್ಯೋಧನ ಮತ್ತು ಕರ್ಣ ಇವರಿಬ್ಬರ ಸ್ನೇಹ ಹೇಗಿರುತ್ತದೆ ಎಂದರೆ ಒಮ್ಮೆ ಕರ್ಣ ಧುರ್ಯೋಧನನ ಪತ್ನಿಯ ಜೊತೆ ಪಗಡೆಯಾಡುವ ಸಂಧರ್ಭದಲ್ಲಿ ಅನಿವಾರ್ಯವಾಗಿ ಆಕೆಯನ್ನು ಹಿಡಿಯಲು ಹೋಗಿ, ಆಕೆಯ ಸರ ಕಿತ್ತು ಮಣಿಗಲೆಲ್ಲಾ ಚೆಲ್ಲಾಪಿಲ್ಲಿಯಾಗುತ್ತವೆ ಆ ಸಂಧರ್ಭದಲ್ಲಿ ಅಲ್ಲಿಗೆ ಧುರ್ಯೋಧನ ಬರುತ್ತಾನೆ. ಬಂದವನು ಒಂದು ಸ್ವಲ್ಪವೂ ಅನುಮಾನಿಸದೆ ನಾನು ಮಣಿಗಳನ್ನು ಆಯ್ದು ಕೊಡಲೇ ಎಂದು ಪ್ರಶ್ನಿಸುತ್ತಾನೆ. ಆಗ ಕರ್ಣ ಧುರ್ಯೋಧನನಿಗೆ ರಾಜ ನನ್ನನ್ನು ಕ್ಷಮಿಸು ಎಂದು ಕೇಳಿದಾಗ ಧುರ್ಯೋಧನ ಹೇಳುವುದು ಗೆಳಯ ನನಗೆ ನಿನ್ನಲ್ಲಿ ನಂಬಿಕೆಯಿದೆ ಬಿಡು ಭಯವನ್ನ ಎಂದು ತಾನೇ ಸಮಾಧಾನಿಸುತ್ತಾನೆ. ಅಷ್ಟರಮಟ್ಟಿಗೆ ಧುರ್ಯೋಧನನಿಗೆ ತನ್ನ ಗೆಳಯನ್ನಲ್ಲಿ ನಂಬಿಕೆಯಿರುತ್ತದೆ. ಅದೇ ರೀತಿ ಕರ್ಣನು ಕುರುಕ್ಷೇತ್ರ ಯುದ್ಧ ಆರಂಭವಾದಾಗ ಕರ್ಣನಿಗೆ ಕೃಷ್ಣ ಆತನ ಜನ್ಮರಹಸ್ಯವನ್ನು ತಿಳಿಸಿ, ನೀನು ಪಂದವರಿಗೆಲ್ಲ ಹಿರಿಯ, ಬಂದು ಪಾಂಡವರ ಜೊತೆ ಸೇರು ಎಂದಾಗ, ಕರ್ಣ ಧುರ್ಯೋಧನನನ್ನು ಬಿಟ್ಟು ಪಾಂಡವರ ಜೊತೆ ಹೋಗುವುದಿಲ್ಲ ಕಾರಣವಿಷ್ಟೇ ತಾನು ದ್ರೌಪದಿ ಸ್ವಯಂವರದಲ್ಲಿ ಬಿಲ್ಲನ್ನು ಎತ್ತಲು ಬಂದಾಗ ಕರ್ಣನನ್ನು ಸೂತ ಪುತ್ರ ಎಂಬ ಕಾರಣಕ್ಕೆ ಬಿಲ್ಲನ್ನೇರಿಸಲು ನಿರಕರಿಸಲಾಗುತ್ತದೆ. ಆಗ ಅವನಿಗೆ ಅಂಗ ದೇಶದ ರಾಜನನ್ನಾಗಿ ಮಾಡಿ ಅವನಿಗೆ ಸ್ಥಾನಮಾನ ಕಲ್ಪಿಸಿದವನು ಧುರ್ಯೋಧನ ಹೀಗೆ ಕರ್ಣನಿಗೆ ಹತ್ತು – ಹಲವು ಸಂಧರ್ಭದಲ್ಲಿ ಧುರ್ಯೋಧನ ಬೆಂಬಲವಾಗಿ ನಿಲ್ಲುತ್ತಾನೆ. ಹೀಗೆ ಮಹಾಭಾರತದಲ್ಲಿನ ಅವರಿಬ್ಬರ ಸ್ನೇಹ ಇಂದಿಗೂ ಎಂದೆಂದಿಗೂ ಅಮರವಾಗಿದೆ.

ಹಾಗೆಯೇ ಕೃಷ್ಣ- ಕುಚೆಲರ ಕತೆಯೂ ಕೂಡ ಕುಚೇಲ ಒಬ್ಬ ಬಡವನಾಗಿ ಗೆಳಯನ ಮನೆಗೆ ಸಹಾಯ ಕೇಳಲು ಬಂದು ಸ್ನೇಹಿತನಲ್ಲಿ ತನ್ನ ಬಡತನವನ್ನು ಹೇಳಿಕೊಳ್ಳಲಾಗದೆ ಇದ್ದಾಗ, ಮತ್ತು ಕೃಷ್ಣನಿಗೆಂದು ತಂದ ಅವಲಕ್ಕಿಯನ್ನು ತನ್ನ ಹರಿದ ಬಟ್ಟೆಯಲ್ಲಿ ಗಂಟು ಕಟ್ಟಿ ಕೊಂಡ್ಡಿದ್ದನ್ನು ಕಂಡು ಸ್ವತಹ ಕೃಷ್ಣನೆ ಮಿತ್ರ ನನಗೆಂದು ಏನೋ ತಂದಿರುವ ಹಾಗಿದೆಯಲ್ಲ ಎಂದು ತಾನೇ ಆ ಗಂಟನ್ನು ಬಿಚ್ಚಿ ಅದರಲ್ಲಿದ್ದ ಅವಲಕ್ಕಿಯನ್ನು ಬಿಚ್ಚಿ ತಾನು ತಿಂದು ಅದನ್ನು ನೋಡು ರುಕ್ಮಿಣಿ ಎಷ್ಟು ರುಚಿಯಾಗಿದೆ ನನ್ನ ಗೆಳೆಯ ತಂದಿರುವುದೆಂದು ರುಕ್ಮಿಣಿಯಾ ಜೊತೆ ತಿನ್ನುತಾನೆ ಅಲ್ಲದೆ ಸಹಾಯವನ್ನು ಬೇಡಲು ಬಂದು ಕೇಳದೆ ಹಿಂತಿರುಗಿದ ಕುಚೇಲನ ಬಡತನವನ್ನು ಹೋಗಲಾಡಿಸಿರುತ್ತಾನೆ

ಗೆಳೆಯರಲ್ಲಿ ಕೆಟ್ಟವರೂ ಇರ್ತಾರೆ ಒಳ್ಳೆಯವರೂ ಇರ್ತಾರೆ ಆದ್ರೆ ನಾವು ಅವರ ಹಾಗೆ ಆಗೋದು ಯಾ ಬಿಡೋದು ನಮ್ಮ ಕೈನಲ್ಲೇ ಇದೆ. ಅವರು ಏನಾದರೂ ತಪ್ಪು ಮಾಡಿದ್ರೆ ನಾವು ಅವರಿಗೆ ತಿಳಿಸಿ ಹೇಳಬಹುದಲ್ವ? ಅವರು ನಮಗೇನಾದರೂ ಅಂದಾಗ ಸಿಟ್ಟು ಮಾಡಿಕೊಳ್ಳದೆ ಆಲೋಚಿಸಬಹುದಲ್ವ ? ನಿಜವಾದ ಗೆಳೆಯರು ಇವನ್ನೆಲ್ಲ ಮಾಡ್ತಾರೆ. ಸಹ ಪಾಠಿಯಾಗಿರಬಹುದು, ಸಹೋದ್ಯೋಗಿಯಾಗಿರಬಹುದು, ಬಾಲ್ಯದಲ್ಲಿ ತಾಯಿಯಾಗಿರಬಹುದು, ಮುಪ್ಪಿನಲ್ಲಿ ಮೊಮ್ಮಗನಾಗಿರಬಹುದು ಅಥವಾ ಜೀವನದ ಒಂದು ಘಟ್ಟದಲ್ಲಿ ಅತ್ಮಿಯರಾಗಿ ಇಂದು ಸಂಪರ್ಕದಲ್ಲೂ ಇಲ್ಲದ ಕೆಲ ದಿನದ ಮಟ್ಟಿನ ಆತ್ಮೀಯ ಹೃದಯಿಗಳಾಗಿರಬಹುದು ಅದೇ ರೀತಿ ಒಂದು ಉತ್ತಮ ಮಾರ್ಗದರ್ಶನ ನೀಡುವವನೂ ಆತ್ಮೀಯ ಸ್ನೇಹಿತ . ಕೆಲವುಸಾರಿ ಗೆಳೆಯರು ನಮಗೆ ತಂದೆ ತಾಯಿಗಿಂತನೂ ಹೆಚ್ಚು ಹತ್ತಿರ ಆಗ್ತಾರೆ. ಹಾಗಂತ ಅತಿಯಾದರೆ ಅಮ್ರುತಾನೂ ವಿಷ ಅಲ್ವಾ? ಸ್ವಲ್ಪ ಯೋಚನೆ ಮಾಡಿ ಅಡಿ ಇಟ್ರೆ ಒಳ್ಳೇದು. ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ. ಹಾಗೇನೇ ಪ್ರೀತಿ ಗೆಳೆತನದಲ್ಲಿ ಆರಂಭಗೊಂಡು ಗೆಳೆತನದಲ್ಲಿ ಅಂತ್ಯಗೊಳ್ಳುತ್ತದೆ. ಆದರೆ ಕೆಲವು ಹುಡುಗರು, ಹುಡುಗಿಯರು ನೀಡಿದ ಸ್ನೇಹದ ಸಲುಗೆಯನ್ನು ಪ್ರೀತಿ ಎಂದು ತಿಳಿಯುತ್ತಾರೆ. ಸುಂಸುಮ್ನೆ ಏನೇನೊ ಕಲ್ಪಿಸಿಕೊಳ್ತಾರೆ. ಆದ್ರೆ ಅವರಿಗೆ ಗೆಳೆತನ, ಪ್ರೀತಿ, ಜೀವನದ ಅರ್ತಾನೆ ಗೊತ್ತಿರೋದಿಲ್ಲ. ಅವರು ಒಂದು ತಪ್ಪಿಗಾಗಿ ಹಳೆ ಗೆಳೆಯರನ್ನು ದ್ವೇಷಿಸುತ್ತಾರೆ. ಆದರೆ ಅವರನ್ನು ಇಷ್ಟಪಡುವ ಹಲವಾರು ಕಾರಣಗಳನ್ನು ಪರಿಗಣಿಸುವುದಿಲ್ಲ. ಇದೆ ಕಣ್ರೀ ಜೀವನ ಅಂದ್ರೆ ನಾವು ಅನ್ಕೊಂಡಿದ್ದು ಯಾವುದೂ ಆಗಲ್ಲ. ಎಲ್ಲಾರೂ ನಮ್ಮ ಆಸೆಗಳಿಗೆ ವಿರೋಧ ಇರುವಂತೆ ಕಾಣಿಸ್ತಾರೆ. ಆದ್ರೆ ಅವರು ಹೇಳೋದ್ರಲ್ಲೂ ಸತ್ಯ ಇರತ್ತೆ. ನಾವು ಇನ್ನೊಬ್ರನ್ನ ಹೇಗೆ ಅರ್ತ ಮಾಡ್ಕೋತೀವಿ ಅನ್ನೋದರ ಮೇಲೆ ನಮ್ಮ ಮತ್ತು ಅವರ ಸಂಭಂಧ ನಿಂತಿರತ್ತೆ. ಗುಣಾವಗುಣಗಳನ್ನು ಚರ್ಚಿಸದವನೇ ಆಪ್ತ ಸ್ನೇಹಿತ ಆಗ್ತಾನೆ.

ಇಂದಿನ ದಿನಗಳಲ್ಲಿ ಸರ್ವ ಶ್ರೇಷ್ಠ ಕ್ರಿಕೆಟಿಗ ಸಚಿನ್ ಅವರ ಸ್ವಭಾವ ಗೆಳೆತನಕ್ಕೆ ಒಂದು ಒಳ್ಳೆಯ ನಿದರ್ಶನ. ಅವರು ಎಷ್ಟೇ ಉನ್ನತ ಶಿಖರಕ್ಕೆರಿದರೂ ಅವರಿಗಿಂತ ಸಣ್ಣವರೊಂದಿಗೆ ಅವರಿರುವ ರೀತಿ ನೋಡಿ ಕಲಿಯುವನ್ತಹುದು.

ಕಾಲೇಜನ್ನೇ ತಗೊಳ್ಳಿ, ಅಲ್ಲಿ ಹಲವಾರು ಥರ ಗೆಳೆಯರಿರ್ತಾರೆ. ಅಲ್ಲಿ ಇರೋತನಕ ಜೀವದ ಗೆಳೆಯರಾಗಿ ಇರ್ತಾರೆ. ದಿನಾ ಎಸ ಎಂ ಎಸ, e-ಮೇಲ್ ಮಾಡಿಕೊಂಡೆ ಇರ್ತಾರೆ. ಸ್ವಲ್ಪ ಸಮಯದ ಬಳಿಕ ಅವರ ಗುರಿ ತಲಪೋದಕ್ಕೆ ಬೇರೆ ಆಗ್ತಾರೆ. ಆಗಲೇ ಬೇಕು ನಿಜ ಆದ್ರೆ ಆಮೇಲೆ ಒಬ್ರನ್ನ ಒಬ್ರು ಮರ್ತೆ ಬಿಡ್ತಾರೆ. ಎದುರಲ್ಲೇ ಸಿಕ್ಕು ಒಬ್ಬ ಹಾಯ್ ಅಂದ್ರೆ ಮತ್ತೊಬ್ಬ ನೀವು ಯಾರು ಅಂತ ಕೇಳ್ತಾನೆ. ಕನಿಷ್ಠ ಪಕ್ಷ ಒಂದು ಎ-ಮೇಲ್ ಕೂಡ ಇರಲ್ಲ ಆಮೇಲೆ, ಎಂತ ವಿಪರ್ಯಾಸ ಅಲ್ವ? ಏನು ಮಾಡೋದು ಈಗಿನ ಕೆಲಸದೊತ್ತದ, ಸಮಯದ ಅಭಾವ ಏನು ಬೇಕಾದ್ರೂ ಆಗಬಹುದು. ಗೆಳೆಯ ಬರ್ತಾನಂದ್ರೆ ಮನೇಲೆ ಇದ್ರೂ ಇಲ್ಲ ಅಂತ ಸುಳ್ಳು ಹೇಳೋರೂ ಇದ್ದಾರೆ. ಏನೆ ಇರಲಿ ನಾವಂತೂ ಜೀವನ ಪೂರ್ತಿ ಒಳ್ಳೆ ಸ್ನೇಹಿತರಾಗಿರೋಣ.

ನನ್ನ ಇದುವರೆಗಿನ ಜೀವನದಲ್ಲಿ ನಾನು ಕೇಳಿದ ಒಂದು ಅರ್ತಪೂರ್ಣ ಗೆಳೆತನದ ಬಗೆಗಿನ ಗೀತೆ…….

ಚಿತ್ರ: ಜಾಲಿಡೇಸ್
ಸಾಹಿತ್ಯ: ಕವಿರಾಜ್
ಸಂಗೀತ: ಮಿಕ್ಕಿ ಜೆ ಮೇಜರ್
ನಿರ್ದೇಶನ: ಎಂ.ಡಿ.ಶ್ರೀಧರ್

ರಕ್ತ ಸಂಬಂಧಗಳ ಮೀರಿದ ಬಂಧವಿದು
ಯಾವ ಬಿಂದುವಿನಲ್ಲಿ ಸಂಧಿಸಿಹುದು
ಚಾಚಿ ತೋಳುಗಳನ್ನು ಬಿಗಿದಪ್ಪಿಕೊಳ್ಳುವುದು
ನನ್ನ ಪ್ರತಿ ನೋವನ್ನು ತನ್ನದೆಂದು
ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು

ಓ my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
ಓ my friend ನಮ್ಮ ಸ್ನೇಹವಿದು ಇರಲಿ ಶಾಶ್ವತ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸೇರಿಕೊಂಡು ನಮ್ಮ ದಾರಿ
ಬದುಕು ಎಷ್ಟು ಚೆಂದವೆಂದು ಸಾರುತಿಹುದು ಸಾರಿ ಸಾರಿ
ನೀವು ನೀವು ಅಂತ ಶುರುವಾಯ್ತು ಮೊದಲು
ಲೊ ಲೊ ಅಂತ ಈಗ ಬದಲು
ನಮ್ಮ ನಡುವೆ ಇಲ್ಲ ಕೊಂಚ ಸಂಕೋಚವೂ

ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು
ಓ my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
ಓ my friend ನಮ್ಮ ಸ್ನೇಹವಿದು ಇರಲಿ ಶಾಶ್ವತ

ಮಳೆಯು ಬರಲು ಕಾಗದಾನೇ ದೋಣಿ ಮಾಡಿ ಬಿಟ್ಟ ನೆನಪು
ನಿನ್ನ ಕಂಡು ಬಾಲ್ಯದೆಲ್ಲ ಆಟ ಮತ್ತೆ ಆಡೊ ಹುರುಪು
ತುಂಟ ತನವು ಸೇರಿ ನಮ್ಮ ಸಂಘದಲ್ಲಿ ಪಟ್ಟ ಖುಷಿಗೆ ಲೆಕ್ಕಎಲ್ಲಿ
ತಿಲಿಸೊ ಬಗೆಯೆ ಅರಿಯೆ ನಿನಗೆ ಧನ್ಯವಾದವೆ

ಕೈಯ ಹಿಡಿದು ಹೆಜ್ಜೆ ಬೆಸೆದು ಮುಂದೆ ಮುಂದೆ ನಡೆವ ಎಂದು
ಓ my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ
ಓ my friend ನಮ್ಮ ಸ್ನೇಹವಿದು ಇರಲಿ ಶಾಶ್ವತ

Advertisements
 

2 Responses to “ಸ್ನೇಹ”

  1. Sanjana Says:

    Yes you are exactly right. Friendship never dies….


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s