ನಿನಾದ

ಜನ ಮನಕೆ ಸಾಹಿತ್ಯದ ಹೂರಣ

India My Love (ನನ್ನ ಪ್ರಿಯ ಭಾರತ)…. ಕೆಲ ಸಾಲುಗಳು.. ಜನವರಿ 12, 2010

India My Love (A Spiritual Journey) ಪುಸ್ತಕದ ಹೊರನೋಟ

India My Love… a spiritual journey ಅನ್ನೋ ಒಂದು ಅದ್ಭುತವಾದ ಪುಸ್ತಕ ಇದೆ… ಬರೆದವರು ಇನ್ಯಾರು ಅಲ್ಲ.. ನಮ್ಮ ಪ್ರೀತಿಯ ಓಶೋ ರಜನೀಶರು.. ನಿಮಗೆ ಸಾಧ್ಯವಾದ್ರೆ ಒಮ್ಮೆ ತಗೊಂಡು ಓದಿ ನೋಡಿ.. ಓಹ್… ನಿಮ್ಗೆ ಇಂಗ್ಲಿಷ್ ಅರ್ಥ ಆಗಲ್ಲ ಅಂತಾನಾ???? ತಲೆ ಕೆಡಿಸ್ಕೋಬೇಡಿ.. ನಿಮಗಾಗಿ ವಿಶ್ವೇಶ್ವರ ಭಟ್ಟರು ಅದನ್ನ ಕನ್ನಡೀಕರಿಸಿ “ನನ್ನ ಪ್ರಿಯ ಭಾರತ” ಅಂತ ಹೊರ ತಂದಿದ್ದಾರೆ… ಬಿಡುವಾದಾಗ ಒಮ್ಮೆ ಓದಲೇ ಬೇಕಾದ ಪುಸ್ತಕ ಅದು. ಇಲ್ಲಿ ಅದರ ಕೆಲ ಸಾಲುಗಳನ್ನ ನಿಮಗಾಗಿ ಕೊಟ್ಟಿದ್ದೇನೆ.. ಓದಿ ನಿಮ್ಮ ಅನಿಸಿಕೆ ತಿಳಿಸಿ,

ಭಾರತ ಅನ್ನೋದು ಒಂದು ಕೇವಲ ಭೂಗೋಳ ಅಥವಾ ಇತಿಹಾಸ ಅಲ್ಲ.ಇದು ಕೇವಲ ಒಂದು ದೇಶವಾಗಲೀ,ತುಂಡು ಭೂಮಿಯಾಗಲೀ ಅಲ್ಲ…ಇದು ಅವೆಲ್ಲಕ್ಕಿಂತ ಮಿಗಿಲಾದ ಒಂದು ರೂಪಕ,ಗೇಯಗೀತೆ….ಒಂದು ಅನುಭವ.ಇಲ್ಲಿ ಪಸರಿಸಿರುವ ಒಂದು ಅಲೌಕಿಕ ಶಕ್ತಿ ನಿಮಗೆ ಜಗತ್ತಿನ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ.. ಈ ಥರ ಆರಂಭಗೊಳ್ಳುವ ಇದು ನಿಮ್ಮ ರೋಮಾಂಚನ ಮತ್ತು ದೇಶಭಕ್ತಯನ್ನ ಕ್ಷಣ ಕ್ಷಣದಲ್ಲೂ ಬಡಿದೆಬ್ಬಿಸುವ ರೀತಿ ಅಸಾಮಾನ್ಯ.

ಎಲ್ಲಾ ಭಾರತೀಯರು ಒಟ್ಟಾಗಿ ಒಂದು ಸಲ ಉಚ್ಛೆ ಹೊಯ್ದಿದ್ದರೆ ಇಡೀ ಇಂಗ್ಲೆಂಡ್ ಕೊಚ್ಚಿಕೊಂಡು ಹೋಗುತ್ತಿತ್ತು. ಆವತ್ತು ಇಂಗ್ಲೆಂಡ್ ಅನ್ನೋದು ಭಾರತದ ಒಂದು ಜಿಲ್ಲೆಗೆ ಸಮನಾಗಿತ್ತು. ಆದ್ರೂ ಕೂಡಾ ಭಾರತೀಯರು ಆಂಗ್ಲರ ಗುಲಾಮರಾದರು. ಅದಕ್ಕೆ ಕಾರಣ ಭಾರತದ ಮಣ್ಣು. ಈ ದೇಶದ ಮಣ್ಣು ಅಂತಹದ್ದು. ಈ ಮಣ್ಣಿನಲ್ಲಿ ಮಹಾವೀರ, ಬುದ್ಧ, ಪತಂಜಲಿಗಳು ಜನಿಸುತ್ತಾರೆಯೇ ಹೊರತು, ಒಬ್ಬ ಹಿಟ್ಲರ್, ಒಬ್ಬ ಮುಸಲೋನಿಯನ್ನು ಈ ನಾಡು ಜಗತ್ತಿಗೆ ನೀಡಲಾರದು. ಐದು ಸಾವಿರ ವರ್ಷದ ಇತಿಹಾಸದಿಂದ ಸಾಬೀತಾದ ಮಾತಿದು… ಹೇಳಿ ಹೇಗನ್ನಿಸ್ತಾ ಇದೆ ಇವೆಲ್ಲಾ???

ಅಲೆಗ್ಸಾಂಡರ್, ಹಿಟ್ಲರ್ ಎಲ್ಲಾ ಜಗತ್ತನ್ನೇ ಗೆಲ್ಲಲು ಹೊರಟರು. ಅವರು ಶ್ರೇಷ್ಠರಲ್ಲ. ಯಾಕೆಂದರೆ ಅವರಿಗೆ ಅವರನ್ನೇ ಜಯಿಸಿಕೊಳ್ಳಲು ಆಗಲಿಲ್ಲ. ಹಾಗೆ ಜಯಿಸಲು ಸಾಧ್ಯವಾಗಿದ್ದಿದ್ದರೆ ಅವರಿಗೆ ಜಗತ್ತನ್ನು ಗೆಲ್ಲಬೇಕು ಅನ್ನಿಸುತ್ತಿರಲಿಲ್ಲ. ಪ್ರಪಂಚದಲ್ಲಿ ರಕ್ತದ ಹೊಳೆ ಹರಿಯುತ್ತಿರಲಿಲ್ಲ. ಮಹಾವೀರ, ಬುದ್ದರು ತಮ್ಮನ್ನು ತಾವು ಗೆದ್ದರು. ಆ ಮುಖೇನ ವಿಶ್ವವನ್ನೇ ಯಾರಿಗೂ ಗೊತ್ತಾಗದಂತೆ ಗೆದ್ದುಬಿಟ್ಟರು. ಅದು ಭಾರತದ ಶ್ರೇಷ್ಠತೆ… ಅಂದರೆ ಭಾರತ ಜಗತ್ತಿಗೆ ತನ್ನನ್ನು ತಾನು ಗೆಲ್ಲುವುದನ್ನ ಹೇಳಿ ಕೊಟ್ಟಂತಹ ರಾಷ್ಟ್ರ.

ಹೀಗೆ ಈ ಪುಸ್ತಕದ ತುಂಬೆಲ್ಲಾ ಭಾರತ ಯಾಕೆ ಶ್ರೇಷ್ಠ ಅನ್ನೋ ಬಗ್ಗೆ ಓಶೋ ತುಂಬಾ ಕಥೆ,ಉಪಕಥೆಗಳ ಮೂಲಕ ನಿರೂಪಿಸುತ್ತಾ ಹೋಗುತ್ತಾರೆ. ಆದರೆ ಎಲ್ಲೂ ಇತರೆ ರಾಷ್ಠ್ರಗಳು ಕೀಳು,ಇತರೆ ಧರ್ಮಗಳು ಕೀಳು ಅನ್ನೋ ಭಾವನೆ ಬರೋ ಥರಾ ಬರೆದಿಲ್ಲ. ಎಲ್ಲಾ ವಿಷಯಗಳನ್ನೂ ತುಂಬಾ ಸಕಾರಾತ್ಮಕವಾಗಿ ಹೇಳುತ್ತಾ ಹೋಗುತ್ತಾರೆ… ಅದಕ್ಕೆ ನಂಗೇ ಓಶೋ ತುಂಬಾನೇ ಇಷ್ಟವಾಗ್ತಾರೆ.ಅವರ ಬರವಣಿಗೆಯಲ್ಲಾಗಲೀ ಮಾತುಗಳಲ್ಲಾಗಲೀ ಯಾವುದೇ ಸೋಗುಗಳಿಲ್ಲ… ತುಂಬಾ ನೇರ.. ಹೀಗೆ ಹೇಳುತ್ತಾ ಹೋದರೆ ಇದು ಮುಗಿಯದ ಪುರಾಣ.. ಪುಸ್ತಕದ ಬಗ್ಗೆ ಸ್ವಲ್ಪ ಮಟ್ಟಿನ ಮಾಹಿತಿ ಕೊಡುವುದಷ್ಟೇ ನನ್ನ ಉದ್ದೇಶ.. ನಿಮಗೆ ಇಷ್ಟವಾದ್ರೆ ಒಮ್ಮೆ ಓದಿ.. ಪುಸ್ತಕ ಸಿಕ್ಕಿಲ್ಲಾಂದ್ರೆ ನಂಗೆ ಹೇಳಿ… (ನಿಮಗೆ ಓದಲು ಕೊಡಲಡ್ಡಿಯಿಲ್ಲ!!!)

ಇನ್ನು ಮುಂದಿನ ದಿನಗಳಲ್ಲಿ ಬೇರೆ ಮಾಹಿತಿಯೊಂದಿಗೆ ಸಿಗೋಣ,

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

Advertisements
 

One Response to “India My Love (ನನ್ನ ಪ್ರಿಯ ಭಾರತ)…. ಕೆಲ ಸಾಲುಗಳು..”


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s