ನಿನಾದ

ಜನ ಮನಕೆ ಸಾಹಿತ್ಯದ ಹೂರಣ

ಓಶೋ…ಯಾರಿವರು??? ಜನವರಿ 8, 2010

Filed under: ಓಶೋ - ನಾದಾಮೃತ — Keshava Prasad M @ 4:44 ಅಪರಾಹ್ನ
Tags: , , ,

ಓಶೋ ರಜನೀಶರು...

ಓಶೋ ರಜನೀಶ್…. ಈಗ ಜಗತ್ತಿನಲ್ಲಿ ಈ ಹೆಸರನ್ನು ಕೇಳದವರು ಇಲ್ಲವೇ ಇಲ್ಲ  ಎನ್ನ ಬಹುದೇನೋ. ಆದರೆ ಇಲ್ಲಿ ನಾನು ಅವರ ಬಗ್ಗೆ ಜಾಸ್ತಿ ವಿವರಗಳನ್ನ ಕೊಡಲು ಬಯಸಲ್ಲ… ಆದರೆ ಮುಂದಿನ ದಿನಗಳಲ್ಲಿ ಇಲ್ಲಿ ನೀವು ಓಶೋ ಅವರ ಜೀವನ ಪ್ರೀತಿ,ಅವರ ವಿಚಾರಧಾರೆ,… ಇತ್ಯಾದಿ ಇತ್ಯಾದಿ ನನಗೆ ಇಷ್ಟವಾದ ಅವರ ವಿಚಾರಗಳ ಬಗ್ಗೆ ಬರೆಯಲಿದ್ದೇನೆ. ಇಲ್ಲಿ ಅವರ ಬಗ್ಗೆ ಒಂದು ಚಿಕ್ಕ ಪರಿಚಯ.. ಅವರ ಬಗ್ಗೆ ತಿಳಿದಿಲ್ಲದವರಿಗಾಗಿ…

ರಜನೀಶ್ ಚಂದ್ರ ಮೋಹನ್ ಎಂಬ ವ್ಯಕ್ತಿಯನ್ನು ಜಗತ್ತು ನೂರಾರು ಹೆಸರುಗಳಿಂದ ಕರೆದಿದೆ.ತಮಗೆ ಕಂಡ ಆತನ ಮುಖಕ್ಕೆ ತಮಗೆ ತೋಚಿದ ಹೆಸರನ್ನು ಜನರು ಕೊಡುತ್ತಾ

ಬಂದಿದ್ದಾರೆ.ಆದರೆ ಕ್ಷಣ ಕ್ಷಣಕ್ಕೂ ಹೊಸ ಮುಖಗಳನ್ನು ಅನಾವರಣಗೊಳಿಸುತ್ತಾ ಹೋಗುವ, ಹೆಚ್ಚು ಹೆಚ್ಚುಆಳಕ್ಕಿಳಿದಷ್ಟು ಹೊಸ ಆಯಾಮಗಳಲ್ಲಿ ತೆರೆದುಕೊಳ್ಳುತ್ತಾ ಹೋಗು

ಆ ವ್ಯಕ್ತಿಯ ಎದುರುಜಗತ್ತಿನ ಹೆಸರುಗಳೆಲ್ಲಾ ಕಳಾಹೀನವಾಗಿವೆ. ಆತನನ್ನು ಹಿಡಿದಿಡುವಲ್ಲಿ ಅಕ್ಷರಗಳ ಪುಂಜಗಳುಸೋತಿವೆ. ಆತನನ್ನು ಆಚಾರ್ಯ ಎಂದು ಕರೆದರು, ಭಗವಾನ್

ಎಂದು ಸಂಬೋಧಿಸಿದರು.ಓಶೋ ಎಂದು ಕೂಗಿದರು. ಸೆಕ್ಸ್ ಗುರು ಎಂದು ಗೇಲಿ ಮಾಡಿದರು. ರಾಲ್ಸ್ ರಾಯ್ಸ್ ಸನ್ಯಾಸಿಎಂದು ಬಿರುದುಕೊಟ್ಟರು, ಡೈಮಂಡ್ ವಾಚಿನ ಬುದ್ಧ

ಎಂದು ಕರೆದು ನಕ್ಕರು, ಭಗವಂತ ಎಂದುಪಾದಕ್ಕೆರಗಿದರು, ಮಾನಸಿಕ ಅಸ್ವಸ್ಥ ಎಂದು ತೀರ್ಪುಕೊಟ್ಟರು.ಆದರೆ ಯಾವ ರೀತಿ ಪುಟಕ್ಕಿಟ್ಟರೆ ಮಾತ್ರ ಚಿನ್ನಕ್ಕೆ ಬೆಲೆ ಬರುತ್ತೋ ಅದೇ ರೀತಿ ಇವರಿಗೂ ಎಂದೂ ಮರೆಯದ,ಯಾರೂ ಮರೆಯದ ಹೆಸರು ಉಳಿದು ಹೋಯಿತು.ನದಿಯ ನೀರಿನ ಹರಿವಿನ ಜತೆಗೆ ಸಾಗಲು ಜೀವಂತ ಮೀನು ಬೇಕಾಗಿಲ್ಲ.. ಯಾವುದೇ ಒಂದು ಕೊಳೆತ ಕಸವೂ ಸಾಕು… ಆದರೆ ಓಶೋ ನೀರಿನ ವಿರುದ್ಧವಾಗಿ ಈಜಲು ಪ್ರಯತ್ನಿಸಿದ್ದಾರೆ…. ಮತ್ತು ಯಶಸ್ಸನ್ನ ಕೂಡಾ ಕಂಡಿದ್ದಾರೆ… ಅವರು ಈಜುವಾಗ ಒಬ್ಬರೇ ಈಸಿಲ್ಲ… ತನ್ನ ಜತೆಗೆ ಸಾವಿರಾರು ಹಿಂಬಾಲಕರನ್ನೂ ಕರೆದೊಯ್ದಿದ್ದಾರೆ… ಅದಕ್ಕೆ ಅವರಿಗೆ ನಾನು ಚಿರ ಋಣಿ.. ನಾನು ಅವರ Blind Follower ಅಂತೂ ಅಲ್ಲ… ಆದರೆ ಒಳ್ಳೆಯದು ಎಲ್ಲಿದ್ದರೂ ಸ್ವೀಕರಿಸೋದಲ್ಲಿ ತಪ್ಪಿಲ್ಲ ಅಂತ ಭಾವಿಸಿರೋನು… ನೀವು ಇದಕ್ಕೆ ಒಪ್ಪದರೆ ಇಲ್ಲಿ ನಿಮ್ಮ ಅನಿಸಿಕೆಗಳನ್ನ ಬರೆಯಿರಿ…

ಸದ್ಯಕ್ಕೆ ಇಷ್ಟು ಮಾಹಿತಿ ಸಾಕು ಆ ಮಹಾನ್ ಚೇತನದ ಬಗ್ಗೆ.. ಮುಂದಿನ ದಿನಗಳಲ್ಲಿ ಇಲ್ಲೇ ನೀವು ಅವರ ವಿಚಾರಧಾರೆ ಮತ್ತು ನುಡಿಮುತ್ತುಗಳನ್ನ ಸವಿಯಬಹುದು..

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

Advertisements
 

3 Responses to “ಓಶೋ…ಯಾರಿವರು???”

 1. sangamesh Says:

  Realy Osho is great. common and rural peopele must understand obout osho and his thought.

 2. gajanan Says:

  ಆ ಮಹಾನ್ ಚೇತನ ಭಗವಾನ್ ಬಗ್ಗೆ ಎದುರುಜಗತ್ತಿನ ಹೆಸರುಗಳೆಲ್ಲಾ ಕಳಾಹೀನವಾಗಿವೆ. ಆತನನ್ನು ಹಿಡಿದಿಡುವಲ್ಲಿ ಅಕ್ಷರಗಳ ಪುಂಜಗಳುಸೋತಿವೆ. ಆತನನ್ನು……………..
  .ಓಶೋ ಎಂದು ಕೂಗಿದರು

 3. Amaresh hiremath Says:

  ಓಶೋ ಅವರ ಹೆಸರಲ್ಲಿ ಸೆಂಟರ್ ತೆಗೆದಿದ್ದೇನೆ. ಓಶೋ ಸಾಹಿತ್ಯವನ್ನು ಮೂರ ಜಿಲ್ಲೆ (ಗುಲ್ಬಗಾ, ರಾಯಚೂರ ಬಿಜಾಪೂರ ಯಾದಗಿರ)ಯ ಓದುಗರನ್ನು ನನ್ನ ಸೆಂಟರಗೆಬರಮಾಡಿಕೊಂಡು ಅವರಿಗೆ ಓಶೋ ರ ಬಗ್ಗೆ ತಿಳಿಸಲು ಪ್ರಯತ್ನಸಿದ್ದೇನೆ. ನನ್ನ ಶಕ್ತಿಗೂ ಮೀರಿ ಓಶೋರನ್ನು ಪರಿಚಯಿಸುವ ಕಮ೵ ಮಾಡುತ್ತಿದ್ದೇನೆ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s