ನಿನಾದ

ಜನ ಮನಕೆ ಸಾಹಿತ್ಯದ ಹೂರಣ

“””ಸಮುದ್ರ””” ಡಿಸೆಂಬರ್ 24, 2009

ದ್ವಿಗುಣಗೊಳ್ಳುತ್ತಿದೆ ದುಃಖ
ಕಡಲಾಗಿ ಹರಿದಿದೆ ಕಣ್ಣೀರು
ಸಮುದ್ರದ ಅಲೆಗಳೀಗ
ನನ್ನತ್ತಲೇ ನುಗ್ಗಿ ಬರುತ್ತಿವೆ.
ನನ್ನ ಕಣ್ಣೀರೂ ಸಮುದ್ರದೊಳೆ
ಇದೆ ಈಗ ಮೊಗದಲಿ ದುಃಖದ
ಛಾಯೆ ಮಾತ್ರ ಉಳಿದಿದೆ.
ಮರಳಿನಲಿ ಬರೆದೆ ಚಿತ್ರ
ಆಹಾ ಎಂಥ ವಿಚಿತ್ರ ಕ್ಷಣಮಾತ್ರದಲಿ
ನಶಿಸುವುದು ನೈಜವಾದದ್ದು!
ಬನಚು ಕಲ್ಲಿನ ಗಣಪನ ಮೂರ್ತಿ
ಅಲೆಗಳ ಮೂಲಕ ದಡಸೇರುವುದು
ನಾನೆತ್ತಿಕೊಳ್ಳಲು ಮುಂದಾದೆ
ಅದೇ ಅಲೆಗಳು ಮುನ್ನುಗ್ಗಿ ನನಗಿಂತ
ಮೊದಲು ಮೂರ್ತಿಯ ಸಮುದ್ರದ
ಒಳಕ್ಕೆ ಎಳೆದುಕೊಳುವವು.
ಏನು ಅಬ್ಬರ ಅಲೆಗಳದು?!
ಶಾಂತವಾಗುವುದು ಎಂದು ಈ
ಸಮುದ್ರ, ಜೀವನದ ಸಮುದ್ರ?!
ಜೀವನದ ಸಮುದ್ರ ಹೀಗೆ!
ಹಲವು ಅಲೆಗಳು ಬಂದು
ಮನಸ್ಸಿಗೆ ಅಪ್ಪಳಿಸುವವು….!

BY-ಅನೀಶ್ ಪಿ ವಿ

Advertisements
 

4 Responses to ““””ಸಮುದ್ರ””””

  1. Raghu Deekshith Says:

    ಜೀವನದಲ್ಲಿ ಏನೇನು ನೋಡಿದೀಯಾ ಮರಿ? “ದ್ವಿಗುಣಗೊಳ್ಳುತ್ತಿದೆ ದುಃಖ” ಅಂತ ಬರೆದಿದ್ದೀಯ ಆದ್ರೆ ಯಾಕೆ ದುಃಖ?
    ಕವನ ಪರಿಪೂರ್ಣ ಆಗಿಲ್ಲ ಅಂತ ನನಗೆ ಅನಿಸ್ತಾ ಇದೆ. ಮೂರ್ತಿಯ ಅಗತ್ಯತೆ ಕಣ್ತಾ ಇಲ್ಲ. ಸಾಲುಗಳು ಅರ್ಥಪೂರ್ಣವಾಗಿದ್ದರೂ ಬಹುತೇಕ ಚಾಕು ಚಾಕಾಗಿ ಕವನದ ಛಾಪನ್ನು ಮರೆಮಾಚಿದಂತೆ ತೋರುತ್ತದೆ. ಅನುಭವದ ಕೊರತೆ, ಮನಸ್ಸಿನ ಚೌಕಟ್ಟು, ಹೊರಬರಲಾಗದ ಚಡಪಡಿಕೆಗಳು ನಿನ್ನ ಕವನವನ್ನು ವಿಕಾರಗೊಳಿವೆಯೇನೊ… ಉತ್ತಮ ಪ್ರಯತ್ನ, ಬರವಣಿಗೆ ಮುಂದುವರೆಯಲಿ….

  2. Keshava Prasad M Says:

    ಜೀವನದ ಬಗ್ಗೆ ಬರೆದಾಗ…. ನಿನ್ನ ಅನುಭವ ಇನ್ನೂ ಕಡಿಮೆ… ಒಳ್ಳೆಯ ಪ್ರಯತ್ನ…. ದೇವರು ಒಳ್ಲೇದು ಮಾಡ್ಳಿ..

    ಕೇಶವ ಪ್ರಸಾದ್ ಮಾರ್ಗ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s